ಹರಿವೆ ಸೊಪ್ಪಿನಿಂದ ಆರೋಗ್ಯಕ್ಕೆ ಅದೆಷ್ಟು ಪ್ರಯೋಜನವಿದೆ ಗೊತ್ತಾ ?
ಮಂಗಳೂರು, ಸೆಪ್ಟೆಂಬರ್03: ಹಸಿರು ಸೊಪ್ಪುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ದೈನಂದಿನ ಆಹಾರದಲ್ಲಿ ಇವುಗಳನ್ನು ಬಳಸಿಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಹಸಿರು ಸೊಪ್ಪುಗಳು ನೈಸರ್ಗಿಕವಾಗಿದ್ದು, ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಅಡಕವಾಗಿರುತ್ತದೆ. ಆರೋಗ್ಯವನ್ನು ಕಾಪಾಡುವ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು.
ಹರಿವೆ ಸೊಪ್ಪಿನಲ್ಲಿ ಹಲವಾರು ಪೋಷಕಾಂಶಗಳು, ಆಂಟಿಆಕ್ಸಿಡೆಂಟ್ , ವಿಟಮಿನ್, ಕ್ಯಾಲ್ಸಿಯಂಗಳಿವೆ. ಹರಿವೆ ಸೊಪ್ಪಿನಲ್ಲಿ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಇದ್ದು, ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ನೆರವಾಗುತ್ತದೆ. ಇದರಿಂದಾಗಿ ಹೃದಯದ ಕಾಯಿಲೆಯಿಂದ ದೂರವಿರಬಹುದು. ಹರಿವೆ ಸೊಪ್ಪಿನಲ್ಲಿ ಕಬ್ಬಿನಾಂಶವಿದ್ದು, ಇದು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಮತ್ತು ಚಯಾಪಚಯ ಕೋಶಗಳಿಗೆ ಅಗತ್ಯವಾಗಿರುವುದು.
ಹಸಿರು ಸೊಪ್ಪುಗಳಲ್ಲಿ ವಿಟಮಿನ್ ಎ, ಬಿ, ಸಿ, ಕೆ ಅತ್ಯಧಿಕ ಪ್ರಮಾಣದಲ್ಲಿದ್ದು, ದೇಹಕ್ಕೆ ಬೇಕಾದ ಶೇ.97ರಷ್ಟು ವಿಟಮಿನ್ ಒದಗಿಸುತ್ತದೆ. ಫ್ಲಾವನಾಯ್ಡ್ ಫಾಲಿಫೆನಾಲಿಕ್ ಆಂಟಿಆಕ್ಸಿಡೆಂಟ್ ಗಳಾಗಿರುವ ಬೆಟಾ ಕೆರೊಟೆನ್, ಝಿಯಕ್ಸಾಂಥಿನ್ ಮತ್ತು ಲುಟೇನ್ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಫ್ರೀ ರ್ಯಾಡಿಕಲ್ ನಿಂದ ಆಗುವಂತಹ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಣೆ ನೀಡುತ್ತದೆ.
ವಿಟಮಿನ್ ಎ ಆರೋಗ್ಯಕಾರಿ ಚರ್ಮ ಹಾಗೂ ದೃಷ್ಟಿಗೆ ಉತ್ತಮವಾಗಿದ್ದರೆ, ವಿಟಮಿನ್ ಕೆ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಬಹಳ ಉಪಯುಕ್ತ. ವಿಟಮಿನ್ ಬಿ ಯಲ್ಲಿ ಫಾಲಟೆ, ರಿಬೊಫ್ಲಾವಿನ್, ನಿಯಾಸಿನ್, ಥೈಮೇನ್, ವಿಟಮಿನ್ ಬಿ6 ಮತ್ತು ಇತರ ಕೆಲವೊಂದು ಅಂಶಗಳಿದ್ದು, ಇದು ಹುಟ್ಟುವ ಮಕ್ಕಳಲ್ಲಿ ಅಂಗನ್ಯೂನ್ಯತೆ ತಡೆಯುವುದು ಮತ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯ ನೀಡುವುದು.
ಹರಿವೆ ಸೊಪ್ಪಿನಲ್ಲಿ ವಿಟಮಿನ್ ಬಿ ಗುಂಪಿನ ಅಂಶವು ಉತ್ತಮವಾಗಿದೆ. ಫಾಲಟೆ, ರಿಬೊಫ್ಲಾವಿನ್, ನಿಯಾಸಿನ್, ಥೈಮೇನ್, ವಿಟಮಿನ್ ಬಿ6 ಮತ್ತು ಇತರ ಕೆಲವೊಂದು ಅಂಶಗಳು ಈ ಹಸಿರೆಲೆ ತರಕಾರಿಗಳಲ್ಲಿ ಇದೆ. ಇದು ಹುಟ್ಟುವ ಮಕ್ಕಳಲ್ಲಿ ಅಂಗನ್ಯೂನ್ಯತೆ ತಡೆಯುವುದು ಮತ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯ ನೀಡುವುದು.
ಹರಿವೆ ಸೊಪ್ಪಿನಲ್ಲಿ ಪ್ರೋಟೀನ್ ಅತ್ಯಧಿಕ ಪ್ರಮಾಣದಲ್ಲಿ ಇದ್ದು, ಹಸಿವು ಕಡಿಮೆ ಮಾಡುವುದು ಮತ್ತು ರಕ್ತದಲ್ಲಿನ ಇನ್ಸುಲಿನ್ ಮಟ್ಟ ಕಡಿಮೆ ಮಾಡಲು ನೆರವಾಗುವುದು.
ಹರಿವೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದು ಅಸ್ಥಿರಂಧ್ರತೆ ಮತ್ತು ಮೂಳೆಗೆ ಸಂಬಂಧಿಸಿದ ಇತರ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ತುಂಬಾ ಪರಿಣಾಮಕಾರಿಯಾಗಿದೆ.
https://t.co/DUsvASjyyR
ಸಿಂಪಲ್ಲಾಗಿ ದಂಟು ಸೊಪ್ಪಿನ ಸಾಂಬಾರು ಮಾಡೋದು ಹೇಗೆ— Saakshatv-videos (@Saakshatv_video) September 3, 2020








