ಕಡಲೆ ಹನುಮ ಎಂದೇ ಖ್ಯಾತವಾಗಿರುವ ಈ ಹನುಮನ ಶಕ್ತಿ ಅಗಾಧವಾಗಿದೆ. ಇಲ್ಲಿ ಕಡಲೆಯನ್ನೇ ಹಿಡಿದು ಭಕ್ತರು ಬಂದು ಬೇಡಿಕೊಳ್ಳುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಿದ್ದಾಪುರ-ಕುಮಟಾ ಹೆದ್ದಾರಿಯಲ್ಲಿನ “ಕಡಲೆ ಹನುಮಂತ ದೇವಾಲಯಯವೇ ಈ ಪ್ರಸಿದ್ಧ ದೇವಾಲಯ. ಬಿಳಗಿ ಅರಸರ ಕಾಲದಲ್ಲಿ 600 ವರ್ಷದ ಹಿಂದೆ ಇಲ್ಲಿನ ಕಣಿವೆಯ ರಕ್ಷೆಗಾಗಿ ಅರಸರು ಆಂಜನೇಯನನ್ನು ಪ್ರತಿಷ್ಠಾಪಿಸಿದ್ದರು.
ಗುರು ಶ್ರೀಧರರು ಇಲ್ಲಿ ಬಂದು ತಪಸ್ಸನ್ನಾಚರಿಸಿ ದೇಗುಲದ ಜೀರ್ಣೋದ್ಧಾರ ಮಾಡಿದರು.
ಮೂರನೇ ಶ್ರಾವಣ ಶನಿವಾರ ವರ್ಷಕ್ಕೊಮ್ಮೆ ಭಕ್ತರು ಗರ್ಭಗುಡಿ ಪ್ರವೇಶಿಸಿ ಅವರ ಕೈಯಿಂದಲೇ ಅಭಿಷೇಕ ಮಾಡಿ ಕೃತಾರ್ಥರಾಗುತ್ತಾರೆ.
ದೇಗುಲದ ಆವರಣದಲ್ಲಿ ಇರುವ ತುಳಸಿ ಕಟ್ಟೆ ಇವನ ಮೂಲ ಸ್ಥಳವಾಗಿತ್ತು. ಎದುರು ನಾಗ-ಜಟಿಗರು ಕ್ಷೇತ್ರಪಾಲರಾಗಿದ್ದರು. ಏನೇ ಬೇಡಿಕೊಳ್ಳಬೇಕಾದರೂ ಡಲೆ ಕೊಟ್ಟು ಅಪಘಾತ ಆಗಬಾರದೆಂದು ಸಂಕಲ್ಪ ಮಾಡಿಸಿಕೊಂಡು ಹೋಗುತ್ತಾರೆ. ಈ ದೇವಸ್ಥಾನ ಸಿದ್ದಾಪುರದಿಂದ 12 ಕೀ.ಮೀ ದೂರದಲ್ಲಿನ ದೊಂಬಿಕೈಯಲ್ಲಿದ್ದು ಕುಮಟಾ ಬಸ್ಸುಗಳು ಆ ಮಾರ್ಗದಲ್ಲಿ ಸಂಚರಿಸುತ್ತವೆ.








