ಬೆಂಗಳೂರು: ಹವಾ ಸೃಷ್ಟಿಸುವುದಕ್ಕಾಗಿ ಯುವಕನನ್ನು ರೂಮ್ ನಲ್ಲಿ ಕೂಡಿ ಹಾಕಿ ಲಾಂಗ್ ನಿಂದ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ಇದರ ವಿಡಿಯೋ ಮಾಡಿದ ಆರೋಪಿಗಳನ್ನು ಅದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಬ್ಯಾಡರಹಳ್ಳಿ ಠಾಣಾ ಪೊಲೀಸರು ವಿಡಿಯೋ ಆಧರಿಸಿ ಆರೋಪಿಗಳಾದ ಅಭಿಷೇಕ್ ಮತ್ತು ದರ್ಶನ್ ಎಂಬವರನ್ನು ಬಂಧಿಸಿದ್ದರು. ಜೊತೆಗೆ, ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ನಗರದಲ್ಲಿ ಪುಡಿ ರೌಡಿಗಳು ಬಾಲ ಬಿಚ್ಚುತ್ತಿದ್ದಾರೆ. ತಮ್ಮ ಏರಿಯಾಗಳಲ್ಲಿ ಹವಾ ಸೃಷ್ಟಿಸಲು ಲಾಂಗ್ಗಳನ್ನು ಬೀಸುತ್ತಿದ್ದಾರೆ. ಹೀಗಾಗಿ ಜನರು ಭಯಭೀತರಾಗುವಂತಾಗಿದೆ.