IAF ವಿಶೇಷತೆಗಳೇನು ನಿಮಗೆ ಗೊತ್ತಾ..?

1 min read

IAF ವಿಶೇಷತೆಗಳೇನು ನಿಮಗೆ ಗೊತ್ತಾ..?

1932 ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯ ನಂ.1 ಸ್ಕ್ವಾಡ್ರನ್ 1933 ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು! ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊಂದಿದ್ದ ವಾಯುಸೇನೆ ಇಂದು 2000 ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದೆ.

ಅಲ್ಲದೇ, ಭಾರತೀಯ ವಾಯುಸೇನೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವಕ ಪಡೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಒಟ್ಟು 2 ಕೋಟಿ ಭಾರತೀಯ ಸೈನಿಕರು ಪಾಲ್ಗೊಂಡ ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತ್ತು.

ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್ ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜಿ, ಭೂಪೇ0ದ್ರ ಸಿ0ಗ್, ಎ ಬ್ ಅವನ್ ಮತ್ತು ಅಮರ್ಜೀತ್ ಸಿಂಗ್. ಸುಬ್ರತೋ ಮುಖರ್ಜಿ ಅವರನ್ನು ಭಾರತೀಯ ವಾಯುಸೇನೆಯ ಜನಕ ಎನ್ನಲಾಗುತ್ತದೆ.

ಭಾರತೀಯ ವಾಯುಪಡೆ ದೇಶದ್ಯಾಂತ 60ಕ್ಕೂ ಹೆಚ್ಚು ವಾಯು ನೆಲೆಗಳನ್ನು ಹೊಂದಿದೆ. ಈ ಪೈಕಿ 16 ವಾಯು ನೆಲೆಗಳನ್ನು ಹೊಂದಿರುವ ಪಶ್ಚಿಮ ಏರ್ ಕಮಾಂಡ್ ದೇಶದ ಅತಿ ದೊಡ್ಡ ಏರ್ ಕಮಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

IAF

ಇನ್ನು ತಜಕಿಸ್ತಾನದ ಫಾರ್ಕೋರ್ ಪ್ರದೇಶದಲ್ಲೂ ವಾಯು ನೆಲೆ ಹೊಂದಿರುವುದು ವಿಶೇಷ. ಸಿಯಾಚಿನ್ ಗ್ಲೇಸಿಯರ್ ಭಾರತೀಯ ವಾಯುಸೇನೆಯ ಅತ್ಯಂತ ಎತ್ತರದ ವಾಯುನೆಲೆಯಾಗಿದೆ.

1945ರಿಂದ 1950ರ ವರೆಗೆ ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂಬುದಾಗಿ ಗುರುತಿಸಿಕೊಂಡಿದ್ದ ಭಾರತೀಯ ವಾಯುಸೇನೆ ಭಾರತದ ಗಣರಾಜ್ಯೋತ್ಸದ ಬಳಿಕ ಇಂಡಿಯನ್ ಏರ್ ಫೋರ್ಸ್ ಎಂದು ಮರುನಾಮಕರಣವಾಯಿತು.

ಭಾರತೀಯ ವಾಯು ಸೇನೆಯು ‘ನಭ ಸ್ಪಶರ್ಂ ದೀಪ್ತಂ’ ಎಂಬ ಧ್ಯೇಯೋಕ್ತಿಯನ್ನು ಹೊಂದಿದೆ. ಇದನ್ನು ಭವದ್ಗೀತೆಯ ಏಳನೇ ಅಧ್ಯಾಯದಿಂದ ತೆಗೆಯಲಾಗಿದೆ. ಗೀತೆಯಲ್ಲಿ ಹೇಗೆ ಭಗವಾನ್ ಶ್ರೀಕೃಷ್ಣನು ತನ್ನ ಸರ್ವೋಚ್ಛ ದೈವಿಕ ರೂಪವನ್ನು ಅರ್ಜುನನಿಗೆ ತೋರಿಸುತ್ತಾನೋ ಅದೇ ರೀತಿ ಭಾರತೀಯ ವಾಯು ಸೇನೆಯು ರಾಷ್ಟ್ರದ ರಕ್ಷಣೆಗಾಗಿ ಎದುರಾಳಿಗಳನ್ನು ನಾಶ ಪಡಿಸಲು ವಾಯುಪಡೆ ಸದಾ ಸನ್ನದ್ಧವಾಗಿರುತ್ತದೆ.

1947ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಭಾರತೀಯ ವಾಯುಪಡೆಯು ಇದುವರೆಗೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದೆ. ಪದ್ಮಾವತಿ ಬಂಧೋಪಾದ್ಯಾಯ ಅವರು ಭಾರತೀಯ ವಾಯುಪಡೆಯ ಮೊದಲ ಮಹಿಳಾ ಏರ್ ಮಾರ್ಷಲ್.

ಪ್ರಸ್ತುತ ಸುಮಾರು 32 ವಿಮಾನದಳ ತುಕಡಿಗಳನ್ನು ನಮ್ಮ ವಾಯುಸೇನೆ ಒಳಗೊಂಡಿದೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ನಮ್ಮ ವಾಯುಸೇನೆ ನಮ್ಮ ಹೆಮ್ಮೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd