ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಹಾಗೂ ರಾಜಕಾರಣಿ ಪಂಕಜ್ ಪರಾಖ್ ಅವರು 4.1 ಕೆಜಿ ಚಿನ್ನದಿಂದ ವಿನ್ಯಾಸಗೊಳಿಸಿರುವ ವಿಶ್ವದ ಅತ್ಯಂತ ದುಬಾರಿ ಶರ್ಟ್ ಹೊಂದಿರುವ ವ್ಯಕ್ತಿಯಾಗಿದ್ದಾರೆ.
ಈ ದುಬಾರಿ ಶರ್ಟ್ ನಿಂದಲೇ 2016 ರಲ್ಲಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದರು. ಈ 4.10 ಕೆಜಿ ತೂಕದ ಗೋಲ್ಡನ್ ಶರ್ಟ್ ಈಗ 1,78,00,000 ಕೋಟಿ ರೂ. ಮೌಲ್ಯದ್ದಾಗಿದೆ. ಚಿನ್ನದ ಗಡಿಯಾರ, ಹಲವಾರು ಚಿನ್ನದ ಸರಗಳು, ದೊಡ್ಡ ಚಿನ್ನದ ಉಂಗುರಗಳು, ಚಿನ್ನದ ಮೊಬೈಲ್ ಕವರ್ ಮತ್ತು ಚಿನ್ನದ ಚೌಕಟ್ಟಿನ ಕನ್ನಡಕಗಳು ಸೇರಿವೆ.
2014 ರಲ್ಲಿ ಪಂಕಜ್ ಪರಾಖ್ ಅವರ 45 ನೇ ಹುಟ್ಟುಹಬ್ಬಕ್ಕೆ ಈ ದುಬಾರಿ ಶರ್ಟ್ ನ್ನು ನಾಸಿಕ್ ನ ಬಫ್ನಾ ಜ್ಯುವೆಲ್ಲರ್ಸ್ ನಿಂದ ವಿನ್ಯಾಸಗೊಳಿಸಲಾಗಿತ್ತು. 20 ಆಯ್ದ ಕುಶಲಕರ್ಮಿಗಳ ತಂಡವು ಎರಡು ತಿಂಗಳುಗಳಲ್ಲಿ 3,200 ಗಂಟೆಗಳ ಕಾಲ ಶ್ರಮ ವಹಿಸಿ ಈ ಶರ್ಟ್ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ದುಬಾರಿ ಶರ್ಟ್ನಿಂದಲೇ ದಿ ಮ್ಯಾನ್ ವಿತ್ ದಿ ಗೋಲ್ಡನ್ ಶರ್ಟ್ ಎಂಬ ಖ್ಯಾತಿ ಗಳಿಸಿದ್ದಾರೆ.