ಖಾಸಗಿ ವಿಡಿಯೋ ಲೀಕ್ (Video Leak) ಮಾಡುವುದಾಗಿ ಬೆದರಿಸಿ ಪತ್ರ ಬರೆದವರು ಸಿನಿಮಾ ರಂಗದವರೇ ಕಿಚ್ಚ ಸುದೀಪ್ (Sudeep) ಹೇಳಿದ್ದಾರೆ.
ಈ ರೀತಿ ಪತ್ರ ಬರೆದವರು ಯಾರು ಅಂತಾನು ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರಿಗೆ ಪಾಠ ಕಲಿಸುತ್ತೇವೆ. ಯಾವುದರ ಮೂಲಕ ಅವರಿಗೆ ಉತ್ತರ ನೀಡಬೇಕೋ ಆ ಮೂಲಕ ನೀಡುತ್ತೇವೆ ಎಂದು ಹೇಳಿದ್ದಾರೆ.
ಸುದೀಪ್ ಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿ (Puttenahalli) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಮಾರ್ಚ್ 29 ರಂದೇ ಪತ್ರ ಬರೆಯಲಾಗಿದೆ ಎನ್ನಲಾಗಿದ್ದು, ಈ ಕುರಿತು ಸುದೀಪ್ ಅವರ ಆಪ್ತ ಜಾಕ್ ಮಂಜು ದೂರು ನೀಡಿದ್ದಾರೆ.
ಜಾಕ್ ಮಂಜು (Jack Manju) ನೀಡಿದ ದೂರಿನನ್ವಯ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುತ್ತೇವೆ ಎನ್ನುವುದರ ಜೊತೆಗೆ ಕೆಲ ಅವಾಚ್ಯ ಶಬ್ದಗಳನ್ನು ಸಹ ಲೆಟರ್ ನಲ್ಲಿ ದುಷ್ಕರ್ಮಿಗಳು ಬರೆದಿದ್ದಾರೆ ಎನ್ನಲಾಗುತ್ತಿದೆ.








