ವಿಜಯಪುರ: ವೈದ್ಯನೊಬ್ಬ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದು ರಂಪಾಟ ಮಾಡಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಚಡಚಣ(chadchan) ತಾಲೂಕಿನ ಶಿರನಾಳ ಆಯುಷ್ ಆರೋಗ್ಯ ಮಂದಿರದಲ್ಲಿ ಈ ಘಟನೆ ನಡೆದಿದೆ. ಆರೋಗ್ಯ ಮಂದಿರದ ವೈದ್ಯ ನಾರಾಯಣ ರಾಠೋಡ, ಹೆಲ್ತ್ ಇನ್ಸ್ಪೆಕ್ಟರ್ ಆಫೀಸರ್ ಹುದ್ದೆಯಲ್ಲಿದ್ದಾರೆ. ಈ ವ್ಯಕ್ತಿ ಕುಡಿದ ನಶೆಯಲ್ಲಿ ಆಸ್ಪತ್ರೆಯ ಪೀಠೋಪಕರಣಗಳನ್ನು ಪುಡಿ ಮಾಡಿದ್ದಾನೆ.
ಅಲ್ಲದೇ, ಮತ್ತಿನಲ್ಲಿ ಆಸ್ಪತ್ರೆಯಲ್ಲಿ ಬಿದ್ದು ಹೊರಳಾಡಿದ್ದಾನೆ. ಹಿಂದೆ ಇದೇ ರೀತಿ ಮಧ್ಯ ಸೇವಿಸಿದ ಆರೋಪದ ಮೇಲೆ ಈತನನ್ನು ಅಮಾನತ್ತು ಮಾಡಲಾಗಿತ್ತು. ಸದ್ಯ ಮತ್ತೆ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದು ರಂಪಾಟ ಮಾಡಿದ್ದಾನೆ. ಈತನ ಹತ್ತಿರ ಬರುವ ಮಹಿಳಾ ರೋಗಿಗಳನ್ನು ಕೂಡ ಆತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ವೈದ್ಯನನ್ನು ಅಮಾನತ್ತು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.








