ADVERTISEMENT
Tuesday, September 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಪತ್ನಿಯಿಂದಲೇ ಅರವಳಿಕೆ ತಜ್ಞ ಡಾ. ಕಿರಣ್ ಕೊಲೆ: ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

Shwetha by Shwetha
July 17, 2026
in ರಾಜ್ಯ, Newsbeat, ಅಪರಾಧ
Share on FacebookShare on TwitterShare on WhatsappShare on Telegram

ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳ ಗ್ರಾಮದ ಅರವಳಿಕೆ ತಜ್ಞ ಡಾ. ಕಿರಣ್ ಹೊನ್ನಣ್ಣನವರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣದಲ್ಲಿ ಪತ್ನಿ ಡಾ. ಪ್ರಿಯಾಂಕಾ ಅವರನ್ನು ಪೊಲೀಸರು ಆರೋಪಿಯಾಗಿ ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ.

ಪೊಲೀಸರ ಮಾಹಿತಿ ಪ್ರಕಾರ, ಡಾ. ಕಿರಣ್ ಮತ್ತು ವಿಜಯಪುರ ಮೂಲದ ನೇತ್ರ ತಜ್ಞೆ ಡಾ. ಪ್ರಿಯಾಂಕಾ ಸುಮಾರು 9 ವರ್ಷಗಳ ಹಿಂದೆ ಎರಡನೇ ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಬಳಿಕ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ.

Related posts

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

September 13, 2026
ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

September 13, 2026

ವೈದ್ಯೆಯಾಗಿದ್ದರೂ ಡಾ. ಪ್ರಿಯಾಂಕಾ ಖಾಸಗಿ ಪ್ರಾಕ್ಟೀಸ್ ನಡೆಸದೆ ಮನೆಯಲ್ಲೇ ಇದ್ದರು. ಅಲ್ಲದೆ, ಪತಿಯ ಕುಟುಂಬದವರೊಂದಿಗೆ ಹೆಚ್ಚು ಸಂಪರ್ಕ ಇಟ್ಟುಕೊಳ್ಳುತ್ತಿರಲಿಲ್ಲ. ಪತಿಯ ಸಂಬಂಧಿಕರು ಮನೆಗೆ ಬಂದಾಗ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕುಟುಂಬದ ಆಪ್ತರ ಪ್ರಕಾರ, ಉತ್ತಮ ಆರ್ಥಿಕ ಹಿನ್ನೆಲೆಯ ಕುಟುಂಬದಿಂದ ಬಂದಿದ್ದ ಪ್ರಿಯಾಂಕಾ ಅವರಿಗಿಂತ ಭಿನ್ನವಾಗಿ, ಸಾಮಾನ್ಯ ಕುಟುಂಬದಿಂದ ಬಂದಿದ್ದ ಡಾ. ಕಿರಣ್ ಬಡ ರೋಗಿಗಳ ಚಿಕಿತ್ಸೆಗೆ ವಿಶೇಷ ಆದ್ಯತೆ ನೀಡುತ್ತಿದ್ದರು. ಅವರ ಸರಳ ಸ್ವಭಾವದಿಂದ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಆದರೆ, ಪತ್ನಿಯೊಂದಿಗೆ ಆಗಾಗ ಉಂಟಾಗುತ್ತಿದ್ದ ಕೌಟುಂಬಿಕ ಕಲಹದಿಂದ ಇತ್ತೀಚಿನ ದಿನಗಳಲ್ಲಿ ಅವರು ಮೌನವಾಗಿದ್ದರು ಎನ್ನಲಾಗಿದೆ. ಆದರೂ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ತನಿಖೆಯ ಪ್ರಕಾರ, ಪತಿಯ ಮೇಲೆ ನಿರಂತರ ಅನುಮಾನ ವ್ಯಕ್ತಪಡಿಸುತ್ತಿದ್ದ ಕಾರಣ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಹಿನ್ನೆಲೆಯಲ್ಲೇ ನಿನ್ನೆ ಬೆಳಗ್ಗೆ ಡಾ. ಕಿರಣ್ ಅವರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ವೇಳೆ ಅವರ ಪುತ್ರ ನಿಹಿಲ್ ಮೇಲೆಯೂ ಚಾಕುವಿನಿಂದ ಹಲ್ಲೆ ನಡೆದಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಬಾಲಕ ಉಸಿರಾಡುವುದನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ.

ಪ್ರಾಥಮಿಕ ವಿಚಾರಣೆಯಲ್ಲಿ ತಾನೇ ಈ ಕೃತ್ಯ ಎಸಗಿರುವುದಾಗಿ ಡಾ. ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಅವರು ಇನ್ಸುಲಿನ್ ಚುಚ್ಚಿಕೊಂಡಿದ್ದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ್ ಹಸಬಿ ಅವರ ಪ್ರಕಾರ, ಪ್ರಿಯಾಂಕಾ ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತವನ್ನು ಹೊರತುಪಡಿಸಿ ಬೇರೆ ಯಾವುದೇ ತುರ್ತು ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಮಾನಸಿಕ ಅಥವಾ ಇತರ ಕಾಯಿಲೆಗಳ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪ್ರಕರಣದ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ವೈದ್ಯಕೀಯ ವರದಿ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ShareTweetSendShare
Join us on:

Related Posts

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

by Shwetha
September 13, 2026
0

ತುಮಕೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ಸರಣಿ ದಾಳಿಯ ವಿರುದ್ಧ ಸಹಕಾರ...

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

by Shwetha
September 13, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯ ಪ್ರಕರಣ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ನೆಲೆಸಿರುವ...

ಸ್ವರ್ಗದಲ್ಲಿ 72 ಕನ್ಯೆಯರು ಸಿಗಬಹುದು, ವಿಧಿ-ವಿಧಾನದಂತೆ ಮುಸ್ಲಿಮರಾಗಿ ಬಸವರಾಜ ರಾಯರೆಡ್ಡಿ ಇಸ್ಲಾಂ ಶ್ರೇಷ್ಠ ಹೇಳಿಕೆಗೆ ಪ್ರತಾಪ್‌ ಸಿಂಹ ತಿರುಗೇಟು!

ಇನ್ಸ್‌ಪೆಕ್ಟರ್‌ ನಡೆ ರೋಡ್‌ಸೈಡ್‌ ತರ್ಲೆ ಇದ್ದಂತಿದೆ, ಪೊಲೀಸರಿಗೆ ವೀರಾವೇಷ ಶೋಭಿಸುವುದಿಲ್ಲ: ಗಣೇಶ ಸಮಿತಿಗಳಿಗೆ ಅವಾಜ್ ಹಾಕಿದ ಇನ್ಸ್‌ಪೆಕ್ಟರ್ ವಿರುದ್ಧ ಪ್ರತಾಪ ಸಿಂಹ ಆಕ್ರೋಶ

by Shwetha
September 13, 2026
0

ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯ ವಿಚಾರವಾಗಿ ಮಸೀದಿ ಮುಂದೆ ಹೋಗದಂತೆ ಎಚ್ಚರಿಕೆ ನೀಡಿದ್ದ ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ ಸಿಂಹ ತೀವ್ರ...

ಬ್ರಿಟಿಷರ ಸೇವೆ ಮಾಡಿದವರಿಂದ ನಾವು ದೇಶಭಕ್ತಿ ಕಲಿಯಬೇಕಿಲ್ಲ,ನೇತಾಜಿ ಸೈನ್ಯ ಕಟ್ಟುತ್ತಿದ್ದರೆ ಇವರು ಬ್ರಿಟಿಷರಿಗೆ ಸಾಥ್ ನೀಡುತ್ತಿದ್ದರು:ಇತಿಹಾಸ ಕೆದಕಿ ಬಿಜೆಪಿಯನ್ನು ಬೆತ್ತಲೆ ಮಾಡಿದ ಖರ್ಗೆ!

ಬ್ರಿಟಿಷರ ಸೇವೆ ಮಾಡಿದವರಿಂದ ನಾವು ದೇಶಭಕ್ತಿ ಕಲಿಯಬೇಕಿಲ್ಲ,ನೇತಾಜಿ ಸೈನ್ಯ ಕಟ್ಟುತ್ತಿದ್ದರೆ ಇವರು ಬ್ರಿಟಿಷರಿಗೆ ಸಾಥ್ ನೀಡುತ್ತಿದ್ದರು:ಇತಿಹಾಸ ಕೆದಕಿ ಬಿಜೆಪಿಯನ್ನು ಬೆತ್ತಲೆ ಮಾಡಿದ ಖರ್ಗೆ!

by Shwetha
September 13, 2026
0

ಬೆಂಗಳೂರು: ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದ ಈಗ ತಾರಕಕ್ಕೇರಿದೆ. ವಂದೇ ಮಾತರಂ ಗೀತೆಯ ಗಾಯನ ಮತ್ತು ದೇಶಭಕ್ತಿಯ ನೈಜ ಇತಿಹಾಸದ...

ಹಸಿರು ಪರದೆ ಹಿಂದೆ ಬಡತನ ಬಚ್ಚಿಟ್ಟ ಕೇಂದ್ರ, ದಿಲ್ಲಿ ಶೃಂಗಸಭೆ ವೈಭವದ ಹಿಂದೆ ಕೊಳೆಗೇರಿಗಳ ಸಂಕಷ್ಟ: ವಾಸ್ತವ ಮರೆಮಾಚಿದ್ರೆ ಸತ್ಯ ಬದಲಾಗಲ್ಲ, ದಿಲ್ಲಿ ಕೊಳೆಗೇರಿಗಳಿಗೆ ಪರದೆ ಹಾಕಿದ್ದಕ್ಕೆ ಮೋದಿ ಸರ್ಕಾರದ ವಿರುದ್ಧ ಎಎಪಿ ಆಕ್ರೋಶ

ಹಸಿರು ಪರದೆ ಹಿಂದೆ ಬಡತನ ಬಚ್ಚಿಟ್ಟ ಕೇಂದ್ರ, ದಿಲ್ಲಿ ಶೃಂಗಸಭೆ ವೈಭವದ ಹಿಂದೆ ಕೊಳೆಗೇರಿಗಳ ಸಂಕಷ್ಟ: ವಾಸ್ತವ ಮರೆಮಾಚಿದ್ರೆ ಸತ್ಯ ಬದಲಾಗಲ್ಲ, ದಿಲ್ಲಿ ಕೊಳೆಗೇರಿಗಳಿಗೆ ಪರದೆ ಹಾಕಿದ್ದಕ್ಕೆ ಮೋದಿ ಸರ್ಕಾರದ ವಿರುದ್ಧ ಎಎಪಿ ಆಕ್ರೋಶ

by Shwetha
September 13, 2026
0

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯ ಸಿದ್ಧತೆಗಳ ನಡುವೆಯೇ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ಗಂಭೀರ ಆರೋಪ ಮಾಡಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram