ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಸಿನಿಮಾ ಒಂದು ಸಿದ್ದವಾಗುತ್ತಿದೆ. ಅರೆ! ಈ ದಿನ ಈ ಚಿತ್ರದ ಬಗ್ಗೆ ಏಕೆ ಹೇಳ್ತಿದ್ದೀರಾ? ಪ್ರತಿ ಬಾರಿ ಒಂದಲ್ಲ ಒಂದು ಸಿನಿಮಾ ಸೆಟ್ಟೇರೋದು ಕಾಮನ್ ! … ಅಂತ ಮೂಗು ಮುರಿಯ ಬೇಡಿ. ಯಾಕೆಂದ್ರೆ ಇಲ್ಲಿ ವಿಶೇಷ ಸಂಗತಿ ಒಂದಿದೆ. ಅದೆ ಶಿವ 143 ಲವ್ ಸ್ಟೋರಿ.
ಇದು ಫೈಟ್ ಸೀಕ್ವೆನ್ಸ್ ನ ಜೊತೆಗೂಡಿಸಿ ನಾಯಕ ಮತ್ತು ನಾಯಕಿ ನಡುವಿನ ರೊಮ್ಯಾನ್ಸ್ ಒಂದರ ಹಿಂದಿನ ಕಥೆ ಏನೋ ಹೌದು. ಆದರೆ ಹೀಗೆ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ಹೊಸ ಹುರುಪಿನಿಂದ ತುಂಬಿರೊ ತಂಡ ಡಾ. ರಾಜ್ ಮೊಮ್ಮಗನಿಗೆ ಸಾಥ್ ನೀಡುತ್ತಿದೆ. ಇದೇ ನಮಗೂ ನಿಮಗೂ ಆಶ್ಚರ್ಯ ಎನಿಸೊ ವಿಚಾರ.
ಒಂದು ವೇಳೆ ನಿಮಗೆ ಹಾಗೆನಿಸದೆ ಇದ್ದರೂ ಪರವಾಗಿಲ್ಲ ಬಿಡಿ ಯಾಕಂದ್ರೆ ನಟ ರಾಮ್ಕುಮಾರ್ ರವರ ಪುತ್ರ- ಕುಮಾರ ಕಂಠೀರವ ಧೀರೆನ್ ರಾಮ್ಕುಮಾರ್ ಒಳಗಿನ ಕಲೆಯನ್ನ ಹೆಕ್ಕಿ ತೆಗೆಯೋ ಕೆಲಸವನ್ನ ಮಾಡಿಯೇ ತೀರುತ್ತೇವೆ ಎಂದು ಇವರು ಪಣ ತೊಟ್ಟು ನಿಂತಿದ್ದಾರೆ. ಅದು ಈಗ ನಿಜವಾಗುತ್ತಿದೆ ಎಂದ್ರೂ ತಪ್ಪಿಲ್ಲ.
ಜಯಣ್ಣ, ಭೋಗೇಂದ್ರ, ಡಾ ಸೂರಿ, ಶಿವ 143ಗೆ ಹಣ ಹೂಡಿದ್ದು, ಚಿತ್ರಕ್ಕೆ ನುರಿತ ಛಾಯಾಗ್ರಾಹಕ ಶಿವಕುಮಾರ್ ಬಿಕೆ ಕ್ಯಾಮರಾ ಕೌಶಲ್ಯತೆ ಇದೆ. ಅದರಂತೆ ನಿರ್ದೇಶಕರಾಗಿ ದಿಲ್ವಾಲಾ, ರಾಂಬೋ 2 ಖ್ಯಾತಿಯ ಅನಿಲ್ ಕುಮಾರ್ ತಮ್ಮೆಲ್ಲಾ ವಿದ್ಯೆಯನ್ನ ಧೀರೆನ್ಗೆ ಧಾರೆಯೆರೆಯುತ್ತಿದ್ದಾರೆ.
ಸಿನಿ ದುನಿಯಾದಲ್ಲಿ ಸ್ಮಾರ್ಟ್ ಹೀರೋ ಎಂದೆ ಹೆಸರು ಪಡೆದಿದ್ದ ರಾಮ್ಕುಮಾರ್ ಪುತ್ರ — ಧೀರೆನ್ ರಾಮ್ಕುಮಾರ್ ಮೊದಲ ಬಾರಿಗೆ ಸಿನಿಮಾ ಒಂದರಲ್ಲಿ ನಟಿಸುತ್ತಿರೋದು ಒಂದೆಡೆ ಆಚ್ಚರಿಯಾದ್ರು, ಇನ್ನೊಂದೆಡೆ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರೋ ಈ ಹೊಸ ನಕ್ಷತ್ರದ ಆಗಮನಕ್ಕೆ ಕಾತುರವೂ ಇದೆ. ನಾಯಕಿ ಮಾನ್ವಿತ ಕಾಮತ್ ಜೊತೆ ಡಾ. ರಾಜ್ ವಂಶದ ಮತ್ತೊಂದು ಕುಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳಿಗೆ ಕೌತುಕವೂ ಇದೆ. ಅರ್ಜುನ್ ಜನ್ಯ ಸಂಗೀತಕ್ಕೆ ರವಿವರ್ಮಾ ಆಕ್ಷನ್ ಮತ್ತು ಸ್ಟಂಟ್ಸ್ ಸೇರಿರೋದ್ರಿಂದ ಈ ಸಿನಿಮಾಗೆ ಮಾಸ್ ಅಪೀಲ್ ಇದ್ದೇ ಇರುತ್ತೆ ಎಂದರ್ಥ.
ಇನ್ನೇನು ಕೆಲವೇ ದಿನಗಳಲ್ಲಿ ಶಿವ 143 ಟೀಸರ್ ಬಿಡುಗಡೆಯಾಗಲಿದೆ.
ಹಾಗಾಗಿಯೇ ಇಡೀ ದoಡು ಈ ಫಸ್ಟ್ ಲುಕ್ನ ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳಿಗೆ ಸಮರ್ಪಿಸುತ್ತಿದೆ. ಸಧ್ಯ ರಿಲೀಸ್ ಆಗಿರೋ ಫಸ್ಟ್ ಲುಕ್ನಲ್ಲಿ ಕ್ಯಾಮರಾ ವರ್ಕ್ ಕೊಂಡಾಡುವಂತಿದೆ. ಇದಕ್ಕೆ ಕಾರಣ ಛಾಯಾಗ್ರಹಕರು ಹೈದರಾಬಾದ್ ಮತ್ತು ಚೆನ್ನೈ ಇಂಡಸ್ಟ್ರಿಯಲ್ಲಿ ನುರಿತ ಅಚ್ಚ ಕನ್ನಡದವರು. ಹೀಗೆ ಹೇಳುತ್ತಲೆ ಇದಲ್ಲಿ ಚಿತ್ರಕ್ಕೆ ಜೀವ ತುಂಬುತ್ತಿರುವವರ ಲಿಸ್ಟ್ ಬೆಳೆಯುತ್ತಲೆ ಹೋಗುತ್ತದೆ. ಶಿವಣ್ಣ ಕೂಡ ಹಾಗೊಮ್ಮೆ ಹೀಗೊಮ್ಮೆ ಬಂದು ಧೀರೆನ್ಗೆ ಗೈಡ್ ಮಾಡಿ ಹೋಗುತ್ತಿದ್ದಾರೆ ಎಂಬ ಸುದ್ದಿಯು ಇದೆ. ಸಿನಿಮಾ ಸಕ್ಸಸ್ ಗೆ ಇನ್ನೇನು ಬೇಕು ಹೇಳಿ..?