ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಅಮೆರಿಕ ನಿಜವಾಗಿಯೂ ಭಾರತವನ್ನು ಪ್ರೀತಿಸುತ್ತದೆಯೇ?

admin by admin
July 8, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಅಮೆರಿಕ ನಿಜವಾಗಿಯೂ ಭಾರತವನ್ನು ಪ್ರೀತಿಸುತ್ತದೆಯೇ?

ಹೊಸದಿಲ್ಲಿ, ಜುಲೈ 8: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಪ್ರೀತಿಸುತ್ತಾರೆ ಎಂದು ಈಗ ಇಡೀ ಜಗತ್ತಿಗೆ ತಿಳಿದಿದೆ. ನಿಯಮಿತವಾಗಿ ಟ್ರಂಪ್ ಭಾರತ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಾತಿಗಿಂತ ಕೃತಿ ಮುಖ್ಯ ಎಂಬ ಮಾತಿನಂತೆ ಮಾತನಾಡುವುದಕ್ಕಿಂತ ಮಾಡಿ ತೋರಿಸುವುದು ಮುಖ್ಯ.
ಆದರೆ ಟ್ರಂಪ್ ಅವರ ಮಾತಿಗೂ ಮತ್ತು ಅವರ ಕಾರ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಕಳೆದ 20 ದಿನಗಳಲ್ಲಿ ಟ್ರಂಪ್ ಆಡಳಿತ ಕೈಗೊಂಡ 2 ದೊಡ್ಡ ನಿರ್ಧಾರಗಳು ಭಾರತ ವಿರುದ್ಧವಾಗಿವೆ. ಅವರು ನಿರ್ದಿಷ್ಟವಾಗಿ ಭಾರತವನ್ನು ಗುರಿಯಾಗಿಸದೇ ಆ ನಿರ್ಧಾರ ತೆಗೆದುಕೊಂಡಿದ್ದರೂ ಆದರ ಪರಿಣಾಮ ಭಾರತದಲ್ಲಿ ಗಣನೀಯವಾಗಿರುತ್ತದೆ.

Related posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

July 5, 2026
ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

July 5, 2026

ಇತ್ತೀಚೆಗೆ ‌ಅಂದರೆ, ಜುಲೈ 4, 2020 ರಂದು, ಅಮೆರಿಕದ 244 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಧನ್ಯವಾದಗಳು, ನನ್ನ ಸ್ನೇಹಿತ. ಅಮೆರಿಕ ಭಾರತವನ್ನು ಪ್ರೀತಿಸುತ್ತದೆ! ‘ ಎಂದು ಹೇಳಿದ್ದರು.

2 ದಿನಗಳ ಬಳಿಕ ಅಂದರೆ ಜುಲೈ 6 ರಂದು, ಅಮೆರಿಕ ವಲಸೆ ಮತ್ತು ಸುಂಕ ನಿರ್ದೇಶನಾಲಯ, ವಲಸೆರಹಿತ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಿನಾಯಿತಿಗಳನ್ನು ಮಾರ್ಪಡಿಸುವ ಕುರಿತು ಹೇಳಿಕೆ ನೀಡಿದೆ.ಇದರಿಂದ ಅಮೆರಿಕದಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳು ಸೂಚಿಸುವ ಆನ್‌ ಲೈನ್ ಕೋರ್ಸ್‌ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರು ಅಮೆರಿಕವನ್ನು ಬಿಡಬೇಕಾಗಬಹುದು. ಕೋವಿಡ್-19 ಭೀತಿಯ ಹಿನ್ನಲೆಯಲ್ಲಿ ಆನ್ ಲೈನ್ ನಲ್ಲಿ ಕೋರ್ಸ್ ಗಳನ್ನು ತೆಗೆದುಕೊಳ್ಳುತ್ತಿರುವ ವಲಸೆಯೇತರ ಎಫ್-1 ಮತ್ತು ಎಂ-1 ವಿದ್ಯಾರ್ಥಿಗಳು ‌ಆನ್ ಲೈನ್ ಕೋರ್ಸ್ ಗಳಿಸಲು ಸಾಧ್ಯವಿಲ್ಲ. ಅವರು ದೇಶ ಬಿಟ್ಟು ಹೋಗಬೇಕು ಇಲ್ಲವೇ ಕಾನೂನು ಮಾನ್ಯತೆ ಪಡೆದು ಬೇರೆ ಕ್ರಮಗಳನ್ನು ‌ ಕೈಗೊಳ್ಳಬೇಕು ಎಂದು ಅಮೆರಿಕ ವಲಸೆ ಮತ್ತು ಸುಂಕ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ವಿಶ್ವವಿದ್ಯಾಲಯಗಳಿಗೆ ಆನ್ ಲೈನ್ ನಲ್ಲಿ ಕೋರ್ಸ್ ಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು ನೀಡುವಂತೆ ಸೂಚಿಸಿದೆ.

ಈ ಅಧಿಸೂಚನೆಯು ಅಮೆರಿಕಾದಲ್ಲಿ ಅಧ್ಯಯನ ನಡೆಸುವ ಕನಸಿನೊಂದಿಗೆ ಹೋದ ಭಾರತೀಯ ವಿದ್ಯಾರ್ಥಿಗಳಲ್ಲಿ ಭೀತಿಯನ್ನು ಹುಟ್ಟುಹಾಕಿದೆ.
ವರದಿಯ ಪ್ರಕಾರ, ಯುಎಸ್ ಕಾಲೇಜುಗಳಲ್ಲಿ ಸುಮಾರು 5.5% ವಿದೇಶಿ ವಿದ್ಯಾರ್ಥಿಗಳನ್ನು ವ್ಯಾಸಂಗ ಮಾಡುತ್ತಿದ್ದಾರೆ. ಈ ಅಧಿಸೂಚನೆಯು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಅನಿಶ್ಚಿತತೆಯನ್ನು ತಂದಿದೆ.
ಜೂನ್‌ನಲ್ಲಿ ಟ್ರಂಪ್ ಆಡಳಿತ 2020 ರ ಡಿಸೆಂಬರ್ ವರೆಗೆ ಯುಎಸ್ ಹೊಸ ಎಚ್ 1-ಬಿ ಮತ್ತು ಎಲ್ 1 ವೀಸಾಗಳನ್ನು ನೀಡುವುದಿಲ್ಲ ಎಂದು ಘೋಷಿಸಿ ಭಾರತಕ್ಕೆ ಮತ್ತೊಂದು ದೊಡ್ಡ ಆಘಾತವನ್ನು ನೀಡಿತ್ತು. ಯುಎಸ್‌ ನ ವಲಸೆ ಮಾಹಿತಿಯ ಪ್ರಕಾರ, 85,000 ಎಚ್ -1 ಬಿ ವೀಸಾಗಳಲ್ಲಿ ಭಾರತಕ್ಕೆ 70% ವರ್ಷಕ್ಕೆ ನೀಡಲಾಗುತ್ತದೆ.
ಇದೆಲ್ಲವನ್ನೂ ಗಮನಿಸುವಾಗ ಡೊನಾಲ್ಡ್ ಟ್ರಂಪ್ ಅವರ ಪ್ರೀತಿಯ ಗುಲಾಬಿಯೊಂದಿಗೆ ದೊಡ್ಡ ಮುಳ್ಳುಗಳು ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಟ್ರಂಪ್‌ ಗೆ, ಯಾವಾಗಲೂ ‘ಅಮೇರಿಕಾ ಫಸ್ಟ್’ ಆಗಿರುತ್ತದೆ ಮತ್ತು ಅವರ ಕಾರ್ಯಗಳು ಯಾವಾಗಲೂ ಭಾರತ ಮತ್ತು ಭಾರತೀಯರ ಮೇಲಿನ ಪ್ರೀತಿಯನ್ನು ಬೇಷರತ್ತಾಗಿಲ್ಲ ಎಂದು ಸೂಚಿಸುತ್ತದೆ.

Tags: americaDonald TrumpH1B VisaindiaNaredra Modistudentvisa
ShareTweetSendShare
Join us on:

Related Posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

by Shwetha
July 5, 2026
0

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಹಸನ ಈಗ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ್ರೋಹಿಗಳು ಯಾರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದ್ದರೂ, ಅವರ...

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

by Shwetha
July 5, 2026
0

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.ಅವರು, ನಾನು ಅಯೋಧ್ಯೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ನೀಡಿದ ₹1.11 ಲಕ್ಷ...

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

by Shwetha
July 5, 2026
0

ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುತ್ತಿರುವ E20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಅನ್ನು ಭೂತಾನ್ ಸ್ವೀಕರಿಸಲು ನಿರಾಕರಿಸಿದ್ದು, ಅದರ ಬದಲಿಗೆ ಸಾಮಾನ್ಯ (ಸ್ಟ್ಯಾಂಡರ್ಡ್) ಪೆಟ್ರೋಲ್ ಪೂರೈಸುವಂತೆ...

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram