ಅಹಮದಾಬಾದ್ : ಇದೇ ತಿಂಗಳ 24ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರನ್ನು ಬರಮಾಡಿಕೊಳ್ಳಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಟ್ರಂಪ್ ಗುಜರಾತ್ ಭೇಟಿ ವೇಳೆ ಯಾವ ರೀತಿಯಲ್ಲೂ ತೊಂದರೆಯಾಗಬಾರದು ಎಂದು ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಆಭಾಸ ತರುವಂಥ ಘಟನೆಗಳು ಅಂದರೆ ಗುಜರಾತ್ ನಲ್ಲಿ ಕೆಲವು ಕಡೆ ಪಾನ್ ತಿಂದು ಗೋಡೆ ಮೇಲೆ ಅಥವಾ ರಸ್ತೆಬದಿ ಉಗುಳೋದು ಸಾಮಾನ್ಯ. ಇಂತಹ ಚಿತ್ರಣಗಳು ಟ್ರಂಪ್ ಅವರಿಗೆ ಕಾಣಸಿಗಬಾರದೆಂದು ಅಹಮದಾಬಾದ್ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ, ಇಲ್ಲಿನ ಏರ್ ಪೋರ್ಟ್ ಬಳಿಯ ಪಾನ್ ಅಂಗಡಿಗಳಿಗೆ ಬೀಗ ಹಾಕಿದೆ.
ಏರ್ ಪೋರ್ಟ್ ಸಮೀಪದ ರಸ್ತೆಗಳು ಹಾಗೂ ಗೋಡೆಗಳು ಸ್ವಚ್ಛವಾಗಿರಬೇಕು ಅನ್ನೋ ನಿಟ್ಟಿನಲ್ಲಿ ಪಾನ್ ಅಂಗಡಿಗಳನ್ನ ಮುಚ್ಚಲಾಗಿದೆ. ಇದಿಷ್ಟೇ ಅಲ್ಲದೆ ಇಲ್ಲಿನ ರಸ್ತೆಗಳಲ್ಲಿ ಬೀದಿನಾಯಿಗಳನ್ನ ಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟದಿಂದಾಗಿ ರಾಜೀನಾಮೆ ನೀಡಿದ ನಾಗೇಂದ್ರ, ಇದು ದಲಿತ ಸಮುದಾಯಕ್ಕೆ ಸಂದ ಜಯ: ಪ್ರತಿಪಕ್ಷ ನಾಯಕ ಆರ್.ಅಶೋಕ
ಇದು ಕೇವಲ ಬಿಜೆಪಿಗೆ ಸಿಕ್ಕಿರುವ ಜಯವಲ್ಲ, ಇದು ಇಡೀ ದಲಿತ ಸಮುದಾಯಕ್ಕೆ ಸಂದಿರುವ ಜಯ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ...








