ಚಿಕ್ಕಬಳ್ಳಾಪುರ : ಬಾಂಬ್ ಹಾಗೂ ಸ್ಪೋಟಕ ಪತ್ತೆದಳದಲ್ಲಿದ್ದ ಶ್ವಾನ ಸಾವನಪ್ಪಿದ್ದು , ಚಿಕ್ಕಬಳ್ಳಾಪುರ ಪೊಲೀಸರು ಕಂಬಿನಿ ಮೀಡಿದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದ ಚಿತ್ರ ಅನ್ನೊ ಶ್ವಾನ ಕಳೆದ ಒಂದು ವರ್ಷದ ಹಿಂದೆ ನಿವೃತ್ತಿಯಾಗಿತ್ತು.. ಪೊಲೀಸ್ ಸಿಬ್ಬಂದಿ ಅರ್ಜುನ್ ಬಳಕಿ ಅವರ ಆಶ್ರಯ ಪಡೆದಿದ್ದ ಚಿತ್ರ. ವಯೋ ಸಹಜ ಕಾರಣದಿಂದ ನಿಧನ ಹೊಂದಿದೆ..
ಶ್ವಾನ ಶವದ ಮುಂದೆ ಶ್ರದ್ಧಾಂಜಲಿ ಸಲ್ಲಿಸಿ ಪೊಲೀಸ್ ಸಿಬ್ಬಂದಿ ಕಂಬಿನಿ ಮಿಡಿದಿದ್ದಾರೆ. ಕೆಲವು ವರ್ಷಗಳಿಂದ ಸಿಬ್ಬಂದಿಯ ಜೊತೆ ಕರ್ತವ್ಯ ನಿರ್ವಹಿಸಿದ್ದ ಚಿತ್ರ. ಗಣ್ಯರು ಜಿಲ್ಲೆಗೆ ಆಗಮಿಸಿದಾಗ ಸ್ಪೋಟಕಗಳ ಪತ್ತೆ ಕಾರ್ಯ ಮಾಡುತ್ತಿತ್ತು ಚಿತ್ರ. ಚಿಕ್ಕಬಳ್ಳಾಪುರ ನಗರದ ಪೊಲೀಸ್ ವಸತಿಗೃಹದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ..