`ಡೊಳ್ಳು’ ಸಿನಿಮಾಗೆ ಮತ್ತೊಂದು ಪ್ರಶಸ್ತಿಯ ಗರಿ..!
ಸದ್ದಿಲ್ಲದೇ ನಿರ್ಮಾಣವಾಗಿದ್ದ ಅಪೇಕ್ಷ ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾ ಇದೀಗ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಸಾಗರ್ ಪುರಾಣಿಕ್ ನಿರ್ದೇಶನದ ಈ ಚಿತ್ರ ಈಗಾಗ್ಲೇ ಹಲವು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣ್ತಿದ್ದು, ಪ್ರಶಂಸೆಗಳನ್ನು ಪಡೆಯುತ್ತಿದೆ.
ಇತ್ತೀಚಿಗೆ ಇನೋವೇಟೀವ್ ಫಿಲಂ ಆಯೋಜಿಸಿದ್ದ 33 ದೇಶಗಳ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ, ಡೊಳ್ಳು ಚಿತ್ರ ಪ್ರದರ್ಶನಗೊಂಡು, ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ.
ಸದ್ಯ ದಾದಾ ಫಾಲ್ಕೆ ಅಕಾಡೆಮಿ ಅತ್ಯುತ್ತಮ ಚಿತ್ರ ಪ್ರಶಸ್ತಿಪಡೆದಿರುವ ಡೊಳ್ಳು ಸಿನಿಮಾಗೆ ಸಿನಿ ವಿಮರ್ಶಕರು ಮೆಚ್ಚುಗೆ ಫುಲ್ ಮಾಕ್ರ್ಸ್ ಹಾಕಿದ್ದಾರೆ. ಹೀಗಾಗಿ ಡೊಳ್ಳು ಸಿನಿಮಾ ಮತ್ತಷ್ಟು ಪ್ರಶಸ್ತಿಗಳನ್ನ ಗಳಿಸೋ ಭರವಸೆ ಹುಟ್ಟಿಸಿದೆ.