ಡಾಲಿ ರತ್ನನ್ ಪ್ರಪಂಚಕ್ಕೆ ನಾಯಕಿಯಾಗುವ ಆಫರ್ ಕೈಬಿಟ್ಟ ರಮ್ಯಾ..!
ಬೆಂಗಳೂರು : ಒಂದು ಕಾಲದಲ್ಲಿ ಸ್ಯಾಂಡಲ್ ವುಡ ನಲ್ಲಿ ಮೆರೆದಿದ್ದ ಮೋಹಕ ತಾರೆ ರಮ್ಯಾಗೆ ಇಂದಿಗೂ ಅದೇ ಕ್ರೇಜ್ ಇದೆ. ಆದ್ರೆ ರಮ್ಯಾ ರಾಜಕೀಯಕ್ಕೆ ಅದೃಷ್ಟ ಪರೀಕ್ಷೆಗಿಳಿದು ಸೋಲುಂಡ ಬಳಿಕ ಸಿನಿಮಾರಂಗದಿಂದಲೂ ಕೆಲ ವರ್ಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದ್ರೆ ಅವರ ಅಭಿಮಾನಿಗಳು ಇಂದಿಗೂ ರಮ್ಯಾ ಸಿನಿಮಾ ಮಾಡಬೇಕೆಂಬ ಆಸೆಯಿಟ್ಟುಕೊಂಡಿದ್ದಾರೆ.
ಆದ್ರೆ ರಮ್ಯಾ ಶಾಸ್ವತವಾಗಿ ಸಿನಿಮಾ ಜಗತ್ತಿನಿಂದ ದೂರವೇ ಉಳಿಯಲು ನಿರ್ಧರಿಸಿಬಿಟ್ಟಿದ್ದಾರೆ. ಮುಂದೆಯೂ ಅವರ ನಿರ್ದಾರ ಬದಲೋಗೋದು ಡೌಟೇ. ಅದಕ್ಕೆ ಒಂದು ಪುರಾವೆಯೂ ಸಿಕ್ಕಿದೆ. ಹೌದು.. ಇತ್ತೀಚಗಷ್ಟೇ ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ದೇಶ ವಿದೇಶದ ಸಿನಿಪ್ರಿಯರ ಮನಸೆಳೆಯುತ್ತಿದೆ. ಸಿನಿಮಾವನ್ನ ಜನ ಮೆಚ್ಚಿಕೊಂಡಿದ್ದಾರೆ. ಆದ್ರೆ ಈ ಸಿನಿಮಾದ ನಾಯಿಕಿಯಾಗಿ ಮೊದಲು ಆಫರ್ ಸಿಕ್ಕಿದ್ದು ರಮ್ಯಾಗೆ ಅನ್ನೋ ಕುತೂಹಲಕಾರಿ ಸಂಗತಿಯನ್ನ ಖುದ್ದು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೌದು.. ‘ರತ್ನನ್ ಪ್ರಪಂಚ’ ಸಿನಿಮಾದ ನಾಯಕಿ ಪಾತ್ರಕ್ಕೆ ಮೊದಲಿಗೆ ನಟಿ ರಮ್ಯಾರನ್ನು ಕೇಳಲಾಗಿತ್ತಂತೆ. ಆದರೆ ಸಿನಿಮಾ ರಂಗದಿಂದಲೇ ದೂರ ಉಳಿದಿರುವ ನಟಿ ರಮ್ಯಾ, ‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಮ್ಯಾ, ‘ರತ್ನನ್ ಪ್ರಪಂಚ’ ಸಿನಿಮಾದ ನಾಯಕಿ ಪಾತ್ರಕ್ಕೆ ನನ್ನನ್ನು ಕೇಳಲಾಗಿತ್ತು, ಈಗ ನಾನು ಏನು ಮಿಸ್ ಮಾಡಿಕೊಂಡೆ ಎಂದು ನೋಡಲು ಸಿನಿಮಾ ವೀಕ್ಷಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.
ನಂತರ ಸಿನಿಮಾ ನೋಡಿದ ಬಳಿಕ ಮತ್ತೊಂದು ಪೋಸ್ಟ್ ಮಾಡಿರುವ ರಮ್ಯಾ, ‘ರತ್ನನ್ ಪ್ರಪಂಚ’ ಬಹಳ ಸ್ವೀಟ್ ಆದ ಸಿನಿಮಾ. ಧನಂಜಯ್, ಪ್ರಮೋದ್, ವೈನಿಧಿ ಜಗದೀಶ್, ಅನು ಪ್ರಭಾಕರ್, ಉಮಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ರವಿಶಂಕರ್ ಎಲ್ಲರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ನಾಯಕಿ ರೆಬಾ ಮೋನಿಕಾ ಮೊದಲ ಸಿನಿಮಾದಲ್ಲಿಯೇ ಅದ್ಭುತವಾಗಿ ನಟಿಸಿದ್ದಾರೆ. ನಾನು ಇಷ್ಟು ಚೆನ್ನಾಗಿ ನಟಿಸಲು ಆಗುತ್ತಿತ್ತೊ ಇಲ್ಲವೊ ಎಂದು ಹೇಳಿಕೊಂಡಿದ್ದಾರೆ.








