ಅಮಿತ್ ಶಾ ಗೆ ವಿಶ್ ಮಾಡಿದ ಸಾರಾ – NCB ದಾಳಿ ಆಗಲ್ಲ ಎಂದ ನೆಟ್ಟಿಗರು..!
ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಗಣ್ಯರು, ರಾಜಕೀಯ ನಾಯಕರು , ಸಿನಿಮಾ ಸ್ಟಾರ್ ಗಳು , ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು.
ಈ ಪೈಕಿ ಬಾಲಿವುಡ್ ನಟ ಅಲಿಖಾನ್ ಪುತ್ರಿ , ಯುವ ನಟಿ ಸಾರಾ ಕೂಡ ಅಮಿತ್ ಶಾ ಅವರಿಗೆ ಟ್ವೀಟ್ ಮೂಲಕ ವಿಶ್ ಮಾಡಿದ್ರು. ಇದೇ ಅವರನ್ನ ಟ್ರೋಲ್ ಗೆ ಗುರುಯಾಗುವಂತೆ ಮಾಡಿದೆ.
ಹೌದು… ಸಾರಾ ಅಲಿ ಕಾನ್ ಹೆಸ್ರು ಬಾಲಿವುಡ್ ಡ್ರಗ್ ಲಿಂಕ್ ಕೇಸ್ ನಲ್ಲಿ ಕೇಳಿಬಂದಿತ್ತು. ವಿಚಾರಣೆಯನ್ನೂ ಕೂಡ ಎದುರಿಸಿದ್ರು. ಆಗಲೇ ಕೇಂದ್ರ ಸರ್ಕಾರವೇ NCB ದಾಳಿಮಾಡಿಸುತ್ತಿದೆ ಎಮಬ ಮಾತುಗಳೂ ಕೂಡ ಹರಿದಾಡಿತ್ತು. ಇದನ್ನೇ ಬೇಸ್ ಆಗಿಟ್ಟುಕೊಂಡು ನೆಟ್ಟಿಗರು ಸಾರಾ ಕಾಲೆಳೆದಿದ್ದಾರೆ. ವ್ಯಂಗ್ಯಾತ್ಮಕವಾಗಿ ಟ್ರೋಲ್ ಮಾಡಿದ್ದಾರೆ.
“ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಸಾರಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ನಾನಾ ಟ್ರೋಲ್ ಕಮೆಮಟ್ ಗಳು ಬಂದಿವೆ. ಕೆಲವರು ‘ಇನ್ನೂ ನಿಮ್ಮ ಮನೆ ಮೇಲೆ NCB ಅಧಿಕಾರಿಗಳು ದಾಳಿ ಮಾಡಲ್ಲ… ನೀವು ಸೇಫ್” ಎಂದ್ರೆ ಕೆಲವರು ವ್ಯಂಗ್ಯಾತ್ಮಕ ಮೀಮ್ಸ್ ಗಳನ್ನ ಶೇರ್ ಮಾಡಿದ್ದಾರೆ.
His reaction 😂🤣
Credit:@PoliticalKidaIn pic.twitter.com/plEH3WFZgu— AnOmAlIsT (@IamAnomalist) October 22, 2021
OMG 2 ಪೋಸ್ಟರ್ ನಲ್ಲಿ ಶಿವನ ಪಾತ್ರದಲ್ಲಿ ಅಕ್ಷಯ್ : ಫಸ್ಟ್ ಲುಕ್ ವೈರಲ್..!
ಪಾಕಿಸ್ತಾನ ಉತ್ತಮ ಮತ್ತು ಶಕ್ತಿಯುತ ತಂಡ : ವಿರಾಟ್
NCB ಕಚೇರಿಗೆ ಭೇಟಿ ನೀಡಿದ್ದ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ..!