OMG 2 ಪೋಸ್ಟರ್ ನಲ್ಲಿ ಶಿವನ ಪಾತ್ರದಲ್ಲಿ ಅಕ್ಷಯ್ : ಫಸ್ಟ್ ಲುಕ್ ವೈರಲ್..!
ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ “#OMG” ( ಓ ಮೈ ಗಾಡ್ ) ಸಿನಿಪ್ರಿಯರಿಗೆ ಇಂದಿಗೂ ಫೇವರೇಟ್ ಅಂತ ಹೇಳಬಹುದು. ಈ ಸಿನಿಮಾದಲ್ಲಿ ಎಮೋಷನ್ , ನೈಜತೆ ಜೊತೆಗೆ ದೇವರ ಶಕ್ತಿ , ಭಕ್ತಿ , ನಂಬಿಕೆ , ಮೂಡನಂಬಿಕೆಗಳ ಮಿಶ್ರಣದ ಜೊತೆಗೆ ಕಾಮಿಡಿ ಎಲಿಮೆಂಟ್ಸ್ ಸಿನಿಪ್ರಿಯರನ್ನ ಸೆಳೆದಿತ್ತು. ಈ ಸಿನಿಮಾ ತೆಲುಗು ಕನ್ನಡದಲ್ಲೂ ರೀಮೇಕ್ ಆಗಿ ಯಶಸ್ಸು ಕಂಡಿತ್ತು. ಇದೀಗ #OMG2 ಸಿನಿಮಾ ರೆಡಿಯಾಗ್ತಿದ್ದು, ಸಿನಿಮಾದಲ್ಲಿನ ಅಕ್ಷಯ್ ಕುಮಾರ್ ಅವರ ವಿಭಿನ್ನ ಲುಕ್ ಪೋಸ್ಟರ್ ರಿಲೀಸ್ ಆಗಿ ಟ್ರೆಂಡ್ ಆಗ್ತಿದೆ. ಅಕ್ಕಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಶಿವನ ಅವತಾರದಲ್ಲಿರುವ ಅಕ್ಷಯ್ ಲುಕ್ ಪೋಸ್ಟರ್‌ಗಳನ್ನು ಬಹಿರಂಗಪಡಿಸಲಾಗಿದೆ. ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಅಲ್ಲದೇ “ರಖ್ ವಿಶ್ವಾಸ್ ತು ಶಿವ್ ಕಾ ದಾಸ್” ಅಂದ್ರೆ ನಂಬಿಕೆಯಿಡು ನೀನು ಶಿವನ ದಾಸ ಎಂಬ ಟ್ಯಾಗ್ ಲೈನ್ ಭಾರೀ ಗಮನ ಸೆಳೆಯುತ್ತಿದೆ. ಪೋಸ್ಟ್ ಶೇರ್ ಮಾಡಿರುವ ಅಕ್ಕಿ #OMG2 ಗೆ ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳು ಬೇಕಾಗುತ್ತವೆ, ಒಂದು ಪ್ರಮುಖ ಸಾಮಾಜಿಕ ಸಮಸ್ಯೆಯನ್ನು ಪ್ರತಿಬಿಂಬಿಸುವ ನಮ್ಮ ಪ್ರಾಮಾಣಿಕ ಮತ್ತು ವಿನಮ್ರ ಪ್ರಯತ್ನ. ಈ ಪ್ರಯಾಣದ ಮೂಲಕ ಆದಿಯೋಗಿಯ ಶಾಶ್ವತ ಶಕ್ತಿಯು ನಮ್ಮನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ.
ಅಮಿತ್ ರೈ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಸ್ಟರ್ ಜೊತೆಗೆ ಅಕ್ಷಯ್ ಚಿತ್ರವು ಸಾಮಾಜಿಕ ಸಮಸ್ಯೆಯನ್ನು ಎತ್ತಿ ತೋರಿಸಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಕೇಪ್ ಆಫ್ ಗುಡ್ ಫಿಲ್ಮ್, ವಿಪುಲ್ ಡಿ ಷಾ, ರಾಜೇಶ್ ಬಹ್ಲ್ ಮತ್ತು ಅಶ್ವಿನ್ ವರ್ಡೆ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
NCB ಕಚೇರಿಗೆ ಭೇಟಿ ನೀಡಿದ್ದ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ..!
#777 ಚಾರ್ಲಿ ಶೂಟಿಂಗ್ ಮುಕ್ತಾಯ – ಭಾವುಕರಾದ ಚಿತ್ರತಂಡ.
ಐಪಿಎಲ್ ತಂಡ ಖರೀದಿಗೆ ರಣವೀರ್ – ದೀಪಿಕಾ ದಂಪತಿ ಪ್ಲಾನ್..!
ಬಾಲಿವುಡ್ ನ ಆಲ್ಬನ್ ಸಾಂಗ್ ಗೆ ಹೆಜ್ಜೆ ಹಾಕಿದ “ತುಪ್ಪದ ಬೆಡಗಿ”..!