ಎಲ್ಲಾ ಓಕೆ.. ಸಿನಿಮಾಗೆ ನಿರ್ಬಂಧ ಯಾಕೆ : ಡಾಲಿ ಧನಂಜಯ್

1 min read
dolly dhananjay

ಎಲ್ಲಾ ಓಕೆ.. ಸಿನಿಮಾಗೆ ನಿರ್ಬಂಧ ಯಾಕೆ : ಡಾಲಿ ಧನಂಜಯ್

ಹುಬ್ಬಳ್ಳಿ : ಎಲ್ಲವೂ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಸಿನಿಮಾಗ್ಯಾಕೆ ನಿರ್ಬಂಧ ಎಂದು ನಟ ಡಾಲಿ ಧನಂಜಯ್ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾದ ಕಾರಣ ಎಂಟು ಜಿಲ್ಲೆಗಳಿಗೆ ಅನ್ವಯ ಆಗುವಂತೆ ಸರ್ಕಾರ ಕೆಲವೊಂದು ಕಟ್ಟು ನಿಟ್ಟಿನ ನಿಯಮಗಳನ್ನ ಜಾರಿಗೆ ತಂದಿದೆ. ಅದರಲ್ಲಿ ಚಿತ್ರಮಂದಿರಗಳಲ್ಲಿನ ಸೀಟು ಭರ್ತಿಗೆ ನಿರ್ಬಂಧ ಹೇರಿತ್ತು.

ಇದಕ್ಕೆ ಚಿತ್ರರಂಗ ವಿರೋಧ ವ್ಯಕ್ತಪಡಿಸಿತ್ತು. ಮುಖ್ಯವಾಗಿ ಯುವರತ್ನ ಸಿನಿಮಾ ಟೀಂ ಸಿಎಂ ಅವರನ್ನ ಭೇಟಿ ಮಾಡಿ ನಿಯಮಗಳನ್ನ ಕೂಡಲೇ ವಾಪಸ್ ಪಡೆಯಬೇಕು ಅಂತಾ ಮನವಿ ಮಾಡಿತ್ತು.

ಇದಕ್ಕೆ ಸ್ಪಂದಿಸಿದ ಬಿಎಸ್ ವೈ ಏಪ್ರಿಲ್ 7, 2021ರವರೆಗೆ 100 ಸೀಟುಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

dolly dhananjay

ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಧನಂಜಯ್, ಸರ್ಕಾರ ಕೆಳವರ್ಗದವನ್ನು ನೋಡಿ ಕಾನೂನುಗಳನ್ನ ಮಾಡಬೇಕು.

ಈ ರೀತಿಯ ನಿಯಮಗಳಿಂದ ಉಳ್ಳವರಿಗೆ ಸಮಸ್ಯೆ ಆಗಲ್ಲ, ನಮ್ಮಂಥವರಿಗೆ ಸಮಸ್ಯೆ ಆಗುತ್ತದೆ.

ಏಪ್ರಿಲ್ 7 ರಿಂದ ಮತ್ತೆ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಸೀಟು ಭರ್ತಿ ನಿಯಮ ಬೇಡ.

ಯಾಕೆಂದ್ರೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಬಡ ಕಲಾವಿದರಿಗೆ ಈ ನಿಯಮ ಸಮಸ್ಯೆ ಆಗುತ್ತದೆ.

ಎಲ್ಲವೂ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ, ಆದರೆ ಈ ಸಿನಿಮಾಗ್ಯಾಕೆ ನಿಬರ್ಂಧ ಎಂದು ಪ್ರಶ್ನಿಸಿದ್ದಾರೆ..

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd