ಆಗಸ್ಟ್ 23ರಂದು ಡಾಲಿ ಧನಂಜಯ್ ಅವರ ಜನ್ಮದಿನ. ಆದರೆ ಕೊರೊನಾ ಆತಂಕದ ನಡುವೆ ಪ್ರತಿಬಾರಿಯಂತೆ ಈ ಬಾರಿ ಅವರ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಾಗುವುದಿಲ್ಲ. ಇತ್ತ ನೆಚ್ಚಿನ ನಟನ ಬರ್ತ್ ಡೇ ಸಂಭ್ರಕ್ಕೆ ಬ್ರೇಕ್ ಬಿದ್ದಿರುವುದು ಅಭಿಮಾನಿಗಳಲ್ಲಿ ನಿರಾಸೆಯುಂಟಾಗಿದೆ. ಇದೀಗ ಈ ಬಾರಿಯ ಜನ್ಮದಿನ ಸಂಭ್ರಕ್ಕೆ ಬ್ರೇಕ್ ಹಾಕೋಣ ಎಂದು ನಟ ಡಾಲಿ ಧನಂಜಯ ಅವರು ತಮ್ಮ ಫ್ಯಾನ್ಸ್ ಗೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಡಾಲಿ ‘ಇದೇ 23ಕ್ಕೆ ಹುಟ್ಟುಹಬ್ಬದ ಸಂಭ್ರಮ. ಪ್ರತಿ ವರ್ಷದ ಹುಟ್ಟುಹಬ್ಬ ನಿಮ್ಮೊಡನೆ ನನಗರಿವಿಲ್ಲದಂತೆಯೆ ಕಳೆದು ಹೋಗುತ್ತಿತ್ತು. ಆದರೆ ಈ ವರ್ಷ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಯಾವುದೇ ಆಚರಣೆಯಿರಿವುದಿಲ್ಲ. ಎಲ್ಲಿದ್ದೀರೋ ಅಲ್ಲಿಂದಲೇ ವಿಶ್ ಮಾಡಿ. ಆಶೀರ್ವದಿಸಿ’ ಎಂದು ಕರೆಕೊಟ್ಟಿದ್ದಾರೆ.
ಇದಲ್ಲದೆ ಅಭಿಮಾನಿಗಳು ಡಾಲಿ ಧನಂಜಯ್ ಅವರಿಗಾಗಿ ತಯಾರಿಸಿರುವ ಹಾಡನ್ನು ಸಹ ಶೇರ್ ಮಾಡಿಕೊಂಡು ಸಂತಸ ಹಂಚಿಕೊಂಡಿದ್ದಾರೆ.








