Pakistan | ಹಣ್ಣು ತಿಂದಿದ್ದಕ್ಕೆ ಬಾಲಕನ ಹತ್ಯೆ
ಪಾಕಿಸ್ತಾನದ ಪಂಜಾಬ್ ನಲ್ಲಿ ಘಟನೆ
10 ವರ್ಷದ ರಿಜ್ವಾನ್ ಮೃತ ಬಾಲಕ
ಫ್ರಿಡ್ಜ್ ನಲ್ಲಿದ್ದ ಹಣ್ಣು ತಿಂದಿದ್ದಕ್ಕೆ ಥಳಿತ
ಘಟನೆಗಾಗಿ ದೇಶದಾದ್ಯಂತ ತೀವ್ರ ಖಂಡನೆ
ಪಾಕಿಸ್ತಾನ್ : ಫ್ರಿಡ್ಜ್ ನಲ್ಲಿಟ್ಟಿದ್ದ ಹಣ ತಿಂದಿದ್ದಕ್ಕೆ ಮನೆ ಕೆಲಸ ಮಾಡುತ್ತಿದ್ದ ಬಾಲಕನನ್ನು ಬರ್ಬರವಾಗಿ ಕೊನೆ ಮಾಡಿರುವ ಘಟನೆ ಪಾಕಿಸ್ತಾನದ ಪಂಜಾಬ್ ನಲ್ಲಿ ನಡೆದಿದೆ.
ಹತ್ತು ವರ್ಷದ ರಿಜ್ವಾನ್ ಮೃತ ಬಾಲಕನಾಗಿದ್ದಾನೆ.
ನಸ್ರುಲ್ಲಾ ಎಂಬಾತನ ಮನೆಯಲ್ಲಿ ರಿಜ್ವಾನ್ ಹಾಗೂ ಕಮ್ರನ್ ಎಂಬ ಬಾಲಕರು ಕೆಲಸ ಮಾಡುತ್ತಿದ್ದರು.
ಈ ವೇಳೆ ಹೊಟ್ಟೆ ಹಸಿವನ ಕಾರಣಕ್ಕೆ ಇಬ್ಬರೂ ಫ್ರಿಡ್ಜ್ ನಲ್ಲಿದ್ದ ಹಣ್ಣು ತಿಂದಿದ್ದಾರೆ.
![Domestic Help 10 Tortured To Death In Pak For Eating Fruits 5 Arrested saaksha tv](http://saakshatv.com/wp-content/uploads/2021/02/n250214674b30c65b18b50b7e9f2b8f31d1a9cd7f6c5910deadea00efd20408e363192ec86-300x225.jpg)
ಇದನ್ನ ಗಮನಿಸಿದ ನಸ್ರುಲ್ಲಾ, ಆತನ ಪತ್ನಿ ಅಮಾನುಷವಾಗಿ ಥಳಿಸಿದ್ದಾರೆ.
ಪರಿಣಾಮ ಇಬ್ಬರೂ ಬಾಲಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರಿಜ್ವಾನ್ ಕೊನೆಯುಸಿರೆಳೆದಿದ್ದಾರೆ.
ಕಮ್ರಾನ್ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.