ವಾಷಿಂಗ್ಟನ್, ಮೇ 22 ; ಮಹಾಮಾರಿ ಕೊರೊನಾ ದಾಳಿಯಿಂದ ತತ್ತರಿಸಿ ಹೋಗಿರುವ ಅಮೆರಿಕಾ, ಚೀನಾ ವಿರುದ್ಧ ಬೆಂಕಿ ಕಾರುತ್ತಲೇ ಇದೆ. ಅದರಲ್ಲೂ ಚೀನಾ ವಿರುದ್ಧ ಫುಲ್ ಗರಂ ಆಗಿರುವ ಡೊನಾಲ್ಡ್ ಟ್ರಂಪ್, ಕೊರೊನಾ ವೈರಸ್ ಬಂದದ್ದು ಚೀನಾದಿಂದಲೇ ಎಂದು ಪದೇ ಪದೇ ವಾದಿಸುತ್ತಾ ನಾವು ಇದನ್ನು ಹಗುರುವಾಗಿ ಪರಿಗಣಿಸುವುದಿಲ್ಲ ಎನ್ನುತ್ತಾ ಕಮ್ಯೂನಿಸ್ಟ್ ದೇಶದ ವಿರುದ್ಧ ಪ್ರತೀಕಾರ ಖಚಿತ ಎಂದು ಹೇಳುತ್ತಲೇ ಇದ್ದಾರೆ.
ಮತ್ತೆ ಇದೀಗ ಮಿಚಿಗನ್ ಪ್ರಾಂತ್ಯದಲ್ಲಿ ಆಫ್ರಿಕಾ ಮೂಲದಅಮೆರಿಕ ನಾಯಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದ ಟ್ರಂಪ್ ಚೀನಾಗೆ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಕೋವಿಡ್-19 ವೈರಸ್ ಬಂದಿರುವುದು ಚೀನಾದಿಂದಲೇ. ಇದರಲ್ಲಿ ಯಾವುದೇ ಅನುಮಾನ ಇಲ್ಲ.
ನಮಗೆ ಈ ಬಗ್ಗೆ ತುಂಬಾ ನೋವು ಮತ್ತುಯಾತನೆಯಾಗಿದೆ. ನಾವು ಈಗಷ್ಟೇ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಸಹಿ ಮಾಡಿದ ಶಾಯಿ ಇನ್ನು ಒಣಗಿಲ್ಲ. ನಾವು ಇದನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.
ಕೊರೊನಾ ವೈರಸ್ ಬಗ್ಗೆ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ವಿಶ್ವದ ದಿಕ್ಕು ತಪ್ಪಿಸಿರುತ್ತಿರುವ ಚೀನಾದ ಬಗ್ಗೆ ಟ್ರಂಪ್ ಮೊದಲಿನಿಂದಲೂ ಕೆಂಡಾಮAಡಲವಾಗಿದ್ದು, ಈಗ ಮತ್ತಷ್ಟು ಕೆರಳಿಸಿದ್ದಾರೆ.