Bagalakote – ಲಕ್ಕವ್ವದೇವಿ ಜಾತ್ರೆ ನಿಮಿತ್ತ ಕತ್ತೆಗಳ ಓಟದ ಸ್ಪರ್ದೆ…
ಕುದುರೆ ಓಟದ ಸ್ಪರ್ದೆಯನ್ನ ನೀವು ಕೇಳಿರುತ್ತೀರ, ನೋಡಿರುಯತ್ತೀರಾ ಆದರೆ ಕರ್ನಾಟಕದ ಈ ಭಾಗದಲ್ಲಿ ಕತ್ತೆ ಓಟದ ಸ್ಪರ್ದೆಯನ್ನ ಆಯೋಜಿಸುತ್ತಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನ್ನಹಟ್ಟಿಯಲ್ಲಿ ನಡೆಯುವ ಜಾತ್ರೆಯಲ್ಲಿ ಕತ್ತೆಯ ಓಟದ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.
ಇಲ್ಲಿನರಾಂಪೂರ ಗ್ರಾಮ ದೇವತೆ ಲಕ್ಕವ್ವ ದೇವಿ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅತ್ತ ಗ್ರಾಮದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಜನರೆಲ್ಲಾ ಭಕ್ತಿಯಿಂದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮುಳುಗಿದ್ದರು. ಇತ್ತ ಲಕ್ಕವ್ವದೇವಿ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 10ಕ್ಕೂ ಅಧಿಕ ಕತ್ತೆಗಳು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ರೇಸ್ನಲ್ಲಿ ರಬಕವಿ-ಬನಹಟ್ಟಿ, ರಾಮಪೂರ ಹಾಗು ಆಸಂಗಿ ಗ್ರಾಮಗಳಿಂದ ಆಗಮಿಸಿದ ಕತ್ತೆಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನವನ್ನು ರಾಮಪೂರದ ರವಿ ಭಜಂತ್ರಿಯವರ ಕತ್ತೆ, ದ್ವಿತೀಯ ಸ್ಥಾನವನ್ನು ಬನಹಟ್ಟಿಯ ಮಹಾದೇವ ಭಜಂತ್ರಿ ಹಾಗು ತೃತೀಯ ಸ್ಥಾನವನ್ನು ರಾಮಪೂರದ ನಾಗಪ್ಪ ಭಜಂತ್ರಿಯವರ ಕತ್ತೆ ಪಡೆದಿದೆ. ಇಲ್ಲಿ ವಾಸಿಸುವ ಭಜಂತ್ರಿ ಸಮುದಾಯದವರ ಕತ್ತೆಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.