ಇಡೀ ರಾಜ್ಯದಲ್ಲೇ ಕೊರೊನಾ ಮಹಾಮಾರಿ ತನ್ನ ರಣಕೇಕೆ ಮುಂದುವರೆಸಿದ್ದು, ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕೋಪ ಒಂದು ಹೆಜ್ಜೆ ಮುಮದೆಯೇ ಇದೆ. ಹೀಗಾಗಿಯೇ ಉದ್ಯಾನ ನಗರಿಯಲ್ಲಿ ರಕ್ಕಸನ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಲಾಕ್ ಡೌನ್ ತಂತ್ರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅದರ ಬಾಗವಾಗಿಯೇ ಇಂದಿನಿAದ ಬೆಂಗಲೂರು ಲಾಕ್ ಡೌನ್ ಆಗಿದ್ದು, ಸಂಪರ‍್ಣ ಸ್ಥಬ್ಧವಾಗಿದೆ. ಲಾಕ್ ಡೌನ್ ಕುರಿತಾಗಿ Pಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕೆಲ ಮಾಹಿತಿಗಳನ್ನ ನಿಡಿದ್ದಾರೆ.
ದಿನಸಿ ವಸ್ತುಗಳ ಖರೀದಿಗೆ ೧೨ ಗಂಟೆವರೆಗೂ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ೧೨ ಗಂಟೆ ಬಳಿಕ ಖರೀದಾರಿಗೆ ಅವಕಾಶವಿಲ್ಲ. ೧೨ ಗಂಟೆ ಒಳಗೆ ನಿಮ್ಮ ಎಲ್ಲಾ ವ್ಯವಹಾರಗಳನ್ನ ಮುಗಿಸಿಕೊಳ್ಳಿ. ಈ ಬಾರಿ ಸೊಂಕು ಪ್ರಕರಣಗಳು ಹೆಚ್ಚು ಇರುವ ಹಿನ್ನೆಲೆ ಚೈನ್ ಬ್ರೇಕ್ ಮಾಡಲು ಲಾಕ್ ಡೌನ್ ಅಸ್ತç ಪ್ರಯೋಗ ಮಾಡಿದ್ದೇವೆ. ಅನಾವಶ್ಯಕವಾಗಿ ಓಡಾಟ ನಡೆಸಿದ್ರೆ ಕ್ರಮ ತೆಗೆದುಕೊಳ್ಲುವ ಅಧಿಕಾರ ಪೊಲೀ ಇಲಾಖೆಗೆ ನೀಡಿದ್ದೇವೆ. ಹೀಗಾಗಿ ಫೋರ್ಸ್ ಬಳಸುವ ಅನಿವರ‍್ಯತೆ ಬಾರದಂತೆ ಜನರು ನೊಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.







