‘ದಯವಿಟ್ಟು ನನ್ನ ತಟ್ಟೆಯ ಅನ್ನವನ್ನ ಕಸಿದುಕೊಳ್ಳಬೇಡಿ, ಅಪಪ್ರಚಾರ ಮಾಡಬೇಡಿ’ : ವಿನೋದ್ ಪ್ರಭಾಕರ್
ಸುಮಾರು ವರ್ಷಗಳಿಂದ ಸಿನಿಮಾರಂಗದಿಂದ ವಿನೋದ್ ಪ್ರಭಾಕರ್ ದೂರವೇ ಇದ್ದರು.. ಇತ್ತೀಚೆಗೆ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ನಟಸಿ ಮೆಚ್ಚುಗೆ ಪಡೆದಿದ್ದರು.. ಇತ್ತೀಚೆಗೆ ವಿನೋದ್ ಪ್ರಭಾಕರ್ ಗೆ ಕೆಲ ಆಫರ್ ಗಳು ಸಹ ಸಿಗುತ್ತಿವೆ.. ಆದರೆ ಈ ನಡುವೆ ವಿನೋದ್ ಪ್ರಭಾಕರ್ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಲು ಆರಂಭವಾಗಿ ಸಿಗಬೇಕಿದ್ದ ಅವಕಾಶಗಳು ಕೈತಪ್ಪಿ ಹೋಗುತ್ತಿವೆ. ಈ ಬಗ್ಗೆ ವಿನೋದ್ ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಬರ್ಟ್ ಸಿನಿಮಾ ಬಳಿಕ ವಿನೋದ್ ಪ್ರಭಾಕರ್ ಅಹಂಕಾರಿ ಆಗಿದ್ದಾನೆ, ಕೋಟ್ಯಂತರ ರುಪಾಯಿ ಸಂಭಾವನೆ ಡಿಮ್ಯಾಂಡ್ ಮಾಡ್ತಾನೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಆದ್ರೆ ಇವೆಲ್ಲವೂ ಸುಳ್ಳು ಸುದ್ದಿ, ನಾನು ಎಂದೂ ಸಂಭಾವನೆ ಡಿಮ್ಯಾಂಡ್ ಮಾಡಿದವನಲ್ಲ. ಒಳ್ಳೆಯ ಕತೆ, ಮೇಕಿಂಗ್ ಗೆ ಡಿಮ್ಯಾಂಡ್ ಮಾಡುತ್ತೇನೆ ಅಷ್ಟೆ ಎಂದಿದ್ದಾರೆ. ಅಲ್ಲದೇ ಯಾರೇ ಕತೆ ಹೇಳೋಕೆ ಬಂದರು ಮೊದಲ ಅವರ ಬಜೆಟ್ ಕೇಳುತ್ತೇನೆ. ನನ್ನ ಸಿನಿಮಾಕ್ಕೆ ಎಷ್ಟು ಲಾಭ ಬರಬಹುದು ಎಂಬ ಅಂದಾಜು ನನಗೆ ಇದೆ. ಹಾಗಾಗಿ ಅವರಿಗೆ ಇಷ್ಟು ಬಜೆಟ್ ಒಳಗೆ ಸಿನಿಮಾ ಮಾಡಿ ಎಂದು ನಾನೇ ಹೇಳಿಬಿಡುತ್ತೇನೆ. ನನ್ನ ಸ್ಟೇಟಸ್ ಏನು ಎಂದು ನನಗೆ ಗೊತ್ತಿದೆ ಎಂದಿದ್ದಾರೆ.
ಇನ್ನೂ 10 ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡಿ ಐದು ಕೋಟಿ ಮಾತ್ರ ರಿಕವರಿ ಆಯ್ತು ಎಂದರೆ ಹೊರಗೆ ಹೋಗಿ ವಿನೋದ್ ಜೊತೆ ಸಿನಿಮಾ ಮಾಡಿ 10 ಕೋಟಿ ಹೋಯ್ತು ಅಂತ ಹೇಳಿಕೊಳ್ತಾರೆ. ಅದೇ 5 ಕೋಟಿ ಒಳಗೆ ಸಿನಿಮಾ ಮಾಡಿದ್ರೆ 5.50 ವಾಪಸ್ ಬಂದ್ರೂ ಸಾಕು. ಅವರೇ ಬಂದು ಇನ್ನೂ ನೂರು ಸಿನಿಮಾ ನನ್ನ ಜೊತೆ ಮಾಡ್ತಾರೆ ಎಂದು ವಿನೋದ್ ಪ್ರಭಾಕರ್ ಹೇಳಿಕೊಂಡಿದ್ಧಾರೆ.