ನೀಲಿ ಸಿನಿಮಾಗಳ ಮೂಲಕ ಸನ್ನಿ ಲಿಯೋನ್ ಹಿಂದೆ ಹೆಸರು ಮಾಡಿದ್ದರು. ಅಶ್ಲೀಲ ಸಿನಿಮಾಗಳಲ್ಲಿ ಸ್ಟಾರ್ ಪಟ್ಟ ಪಡೆದಿದ್ದ ಸನ್ನಿ ನಂತರ ಬಾಲಿವುಡ್ ಕಡೆಗೆ ಆಸಕ್ತಿ ತೋರಿಸಿದರು. ಬಾಲಿವುಡ್ ಅಂಗಳಕ್ಕೆ ಬಂದ ನಂತರ ನೀಲಿ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದರು. ಆದರೂ ಕೆಲವರು ಅವರನ್ನು ಬೇರೆ ದೃಷ್ಟಿಯಲ್ಲಿ ನೋಡುತ್ತಾರಂತೆ. ಹೀಗಾಗಿ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ.
ಇಂದಿಗೂ ಮಾಜಿ ನೀಲಿ ತಾರೆ ಎಂಬ ರೀತಿಯಲ್ಲಿ ಗುರುತಿಸುತ್ತಿರುವುದು ನಟಿಗೆ ಬೇಸರ ಮೂಡಿಸಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ನಾವು ಇಂದಿಗೂ ನೀಲಿ ಚಿತ್ರದ ಬಗ್ಗೆಯೇ ಮಾತನಾಡುತ್ತಿದ್ದೇವೆ ಎಂಬುವುದು ಹೆಚ್ಚು ಚಿಂತೆಗೆ ಕಾರಣವಾಗಿದೆ. ನಾನು ಬಾಲಿವುಡ್ ಗೆ ಕಾಲಿಟ್ಟು 13 ವರ್ಷ ಕಳೆದವು. ಹಳೆಯದು ಹೋಗಲಿ ಬಿಡಿ. ನೀವೇ ಅದನ್ನು ಮರೆಯದಿದ್ದರೆ ನಾವು ಮುಂದೆ ಸಾಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಬಿಗ್ ಬಾಸ್ ಸೀಸನ್ 5 ಮೂಲಕ ಸನ್ನಿ ಲಿಯೋನ್ ಅವರು ಭಾರತದ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ನಂತರ ಅವರಿಗೆ ಬಾಲಿವುಡ್ ನಲ್ಲಿ ಅವಕಾಶಗಳು ಸಿಗಲು ಆರಂಭಿಸಿದವು. ‘ಜಿಸ್ಮ್ 2’ ಸನ್ನಿ ಲಿಯೋನ್ ನಟಿಸಿದ ಮೊದಲ ಬಾಲಿವುಡ್ ಸಿನಿಮಾ. ನಂತರ, ‘ಜಾಕ್ಪಾಟ್’, ‘ರಾಗಿಣಿ ಎಂಎಂಎಸ್ 2’ ಮುಂತಾದ ಸಿನಿಮಾಗಳು ಕೂಡ ಸನ್ನಿ ಲಿಯೋನ್ ಅವರಿಗೆ ಖ್ಯಾತಿ ತಂದು ಕೊಟ್ಟ ಚಿತ್ರಗಳು ಹಲವಾರು ಭಾಷೆಗಳಲ್ಲಿ ಕೂಡ ನಟಿ ಸೊಂಟ ಬಳುಕಿಸಿದ್ದಾರೆ.