ದೇಶದಲ್ಲಿ ಸಂಚರಿಸಲಿದೆ ಡಬ್ಬಲ್ ಡೆಕ್ಟರ್ ರೈಲು !
ನೀವು ಡಬ್ಬಲ್ ಡೆಕ್ಕರ್ Double decker ಬಸ್ ನೋಡಿದ್ದೀರಿ, ಡಬ್ಬಲ್ ಡೆಕ್ಕರ್ ರೈಲು ನೋಡಿದ್ದೀರಾ? ಬಹುತೇಕರ ಉತ್ತರ ಇಲ್ಲವೆಂದು ಬರುತ್ತದೆ. ಆದರೆ ಇನ್ಮುಂದೆ ನೀವು ಡಬ್ಬಲ್ ಡೆಕ್ಕರ್ ರೈಲು ನೋಡಲಿದ್ದೀರಿ.
ಹೌದು ಪ್ರಯಾಣಿಕರು ಮತ್ತು ಸರಕು ಎರಡನ್ನೂ ಒಟ್ಟಿಗೆ ಹೊತ್ತೊಯ್ಯುವಂತಹ ಡಬ್ಬಲ್ ಡೆಕ್ಟರ್ ರೈಲು ಸೇವೆ ಶೀಘ್ರದಲ್ಲೇ ದೇಶದಲ್ಲಿ ಆರಂಭವಾಗಲಿದೆ.
ಪಂಜಾಬ್ ಕಪುರ್ತಲಾದಲ್ಲಿರುವ ರೈಲು ಬೋಗಿಗಳ ಪ್ರಧಾನ ಉತ್ಪಾದನಾ ಕಾರ್ಖಾನೆಯಲ್ಲಿ ಈಗಾಗಲೇ ಇಂತಹ ಬೋಗಿಗಳು ಸಿದ್ಧವಾಗುತ್ತಿವೆ.
ಈ ಡಬ್ಬಲ್ ಡೆಕ್ಕರ್ ಬೋಗಿಗಳಲ್ಲಿ ಮೇಲ್ಬಾಗದಲ್ಲಿ ಪ್ರಯಾಣಿಕರಿಗೆ ಕೂರಲು ಸೀಟ್‌ಗಳ ವ್ಯವಸ್ಥೆ ಇರಲಿದ್ದು, ಕೆಳಭಾಗದಲ್ಲಿ ಸರಕುಗಳನ್ನು ತುಂಬಲು ಅವಕಾಶ ಇರಲಿದೆ. ರೈಲ್ವೆ ಆದಾಯಕ್ಕೆ ಪ್ರಮುಖ ಕೊಡುಗೆ ನೀಡುವ ಸರಕು ಸಾಗಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಲು ಈ ಬೋಗಿಗಳನ್ನು ತಯಾರಿಸಲಾಗುತ್ತಿದೆ
ಈ ಬೋಗಿಗಳು ನಿರ್ಮಾಣವಾದ ಬಳಿಕ ಪ್ರಾಯೋಗಿಕ ಓಡಾಟ ನಡೆಸಿ ಬಳಿಕ, ನಿಯಮಿತವಾಗಿ ಬಳಕೆ ಮಾಡಲಾಗುತ್ತದೆ ಎಂದು ಕಪೂರ್ತಲಾ ರೈಲ್ವೇ ಬೋಗಿ ಕಾರ್ಖಾನೆಯ ಜನರಲ್ ಮ್ಯಾನೇಜರ್ ಆಶೇಶ್ ಅಗರವಾಲ್ ತಿಳಿಸಿದ್ದಾರೆ.








