Double Murder : ಬೆಳಗಾವಿಯಲ್ಲಿ ಕ್ರಿಕೆಟ್ ಆಡಿ ಬರುತ್ತಿದ್ದವರ ಜೋಡಿ ಕೊಲೆ
ಬೆಳಗಾವಿಯಲ್ಲಿ ಜೋಡಿ ಕೊಲೆ
ಅಪರಿಚಿತರಿಂದ ಮಾರಣಾಂತಿಕ ಹಲ್ಲೆ
ಕ್ರಿಕೆಟ್ ಆಡಿ ಬರುತ್ತಿದ್ದವರ ಮೇಲೆ ಹಲ್ಲೆ
ಶಿಂಧೋಳ್ಳಿ ಗ್ರಾಮದಲ್ಲಿ ಘಟನೆ
ಬಸವರಾಜ , ಗಿರೀಶ ಮೃತ ಯುವಕರು
ಬೆಳಗಾವಿಯ ಶಿಂಧೋಳ್ಳಿಯಲ್ಲಿ ಜೋಡಿ ಕೊಲೆಯಾಗಿದ್ದು , ಜನರನ್ನ ಬೆಚ್ಚಿ ಬೀಳಿಸಿದೆ.. ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಡಿ ವಾಪಸ್ಸು ಊರಿಗೆ ಹೊರಟಿದ್ದವರ ಮೇಲೆ ಅಪರಿಚಿತ ಕಿಡಿಗೇಡಿಗಳು ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.. ಸ್ಥಳದಲ್ಲೇ ಓರ್ವ ಮೃತಪಟ್ಟರೆ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ..
ಮೃತ ಯುವಕರಿಬ್ಬರೂ ಸಹ ಶಿಂಧೋಳ್ಳಿ ಗ್ರಾಮದವರಾಗಿದ್ದಾರೆ… 24 ವರ್ಷದ ಬಸವರಾಜ ಮಾರುತಿ , ಗಿರೀಶ ಮೃತರು.. ಕೊಲೆಗೆ ಸರಿಯಾದ ಕಾರಣ ತಿಳಿದುಬಂದಿಲ್ಲ..
ಘಟನಾ ಸ್ಥಳಕ್ಕೆ ಮಾರಿಹಾಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಆರಂಭಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ..
Double Murder in belagavi’s shindholli , saakshatv