ನವದೆಹಲಿ: ಒಂದು ದೇಶ ಒಂದು ಚುನಾವಣೆಗೆ (One Nation, One Election) ಸಂಬಂಧಿಸಿದ ಮಸೂದೆ ಈ ಬಾರಿ ಲೋಕಸಭಾ ಅಧಿವೇಶನದಲ್ಲಿ (Lok Sabha Session) ಮಂಡನೆಯಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದ ಮಸೂದೆ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರವೇ ಹೇಳಿತ್ತು. ಕೇಂದ್ರ ಸರ್ಕಾರ ಪುನರಾಲೋಚನೆಯಲ್ಲಿ ತೊಡಗಿದಂತೆ ಕಂಡು ಬಂದಿದೆ.
ಲೋಕಸಭೆ ಕಲಾಪದ ಪಟ್ಟಿಯಿಂದ ದಿಢೀರ್ ಎಂದು ಇದಕ್ಕೆ ಸಂಬಂಧಿಸಿದ ಮಸೂದೆಗಳನ್ನು ಕೈಬಿಡಲಾಗಿದೆ. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯ ಕುರಿತು ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.
ಒಂದು ದೇಶ ಒಂದು ಚುನಾವಣೆ ಹೊಸದಲ್ಲ. ದೇಶದಲ್ಲಿ ಮೂರು ಬಾರಿ ಏಕಕಾಲದಲ್ಲಿ ಚುನಾವಣೆ ನಡೆದಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (amit sha) ಹೇಳಿದ್ದಾರೆ. ಈಗಾಗಲೇ ಸಂಪುಟ ಸಭೆಯಲ್ಲಿ ಕೋವಿಂದ್ (Ram Nath Kovind) ಸಮಿತಿ ಶಿಫಾರಸುಗಳ ಪೈಕಿ ಸಾಂವಿಧಾನಿಕ ತಿದ್ದುಪಡಿ ಅಗತ್ಯವಿರುವ ಮಸೂದೆಯನ್ನು ಪರಿಗಣಿಸಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವನ್ನು ಪಕ್ಕಕ್ಕೆ ಇಟ್ಟಿರುವ ಕೇಂದ್ರ ಸರ್ಕಾರ, ಸದ್ಯಕ್ಕೆ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಮಸೂದೆ ಮಂಡಿಸಲು ತೀರ್ಮಾನಿಸಿದೆ. ಇದಕ್ಕೆ ಅರ್ಧದಷ್ಟು ರಾಜ್ಯಗಳು ಅನುಮೋದನೆ ನೀಡುವ ಅಗತ್ಯ ಇಲ್ಲ ಎಂದಿದ್ದರು. ಕೇಂದ್ರದ ನಡೆಗೆ ಈಗ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.