ಕರ್ಫ್ಯೂ ವೇಳೆ ಲಸಿಕೆ ಕೊಡುವ ಬಗೆಗಿನ ಊಹಾಪೋಹಳಿಗೆ ಸ್ಪಷ್ಟನೆ ಕೊಟ್ಟ ಸುಧಾಕರ್
ಬೆಂಗಳೂರು : ಲಸಿಕೆ ಕೊಡುವ ಬಗ್ಗೆ ಅನೇಕ ಊಹಾಪೂಹಗಳಿವೆ. ಮಾರ್ಗಸೂಚಿ ಬಿಡುಗಡೆ ಬಳಿಕ, ಚಟುವಟಿಕೆ ನಿರ್ಭಂದ ಇದೆ. ಲಸಿಕೆ ಸಿಗಲ್ಲ ಅಂತ ಕೆಲವರು ಸುಳ್ಳು ಹೇಳಿದ್ದಾರೆ. ಅಗತ್ಯ ಸೇವೆಗಳು ಅಬಾದಿತವಾಗಿರಲಿದೆ. ಲಸಿಕೆ ಪಡೆಯೋದೆಲ್ಲ,ಅಗತ್ಯ ಸೇವೆಗೆ ಒಳಪಡಲಿದೆ. ಲಸಿಕೆ ಕೊಡೋದನ್ನ ಮುಂದುವರೆಸುತ್ತೇವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಲಸಿಕೆ ಒಂದೇ ನಮಗೆ ಇರೋದಿಂದ ತಪ್ಪಿಸಿಕೊಳ್ಳಲು ಇರುವ ಉಪಾಯ. ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆಯಿರಿ. 18 ವರ್ಷ ಮೆಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ. ಇಲ್ಲಿವರೆಗೂ ಲಸಿಕೆ ಶಾರ್ಟೇಜ್ ಇಲ್ಲ. ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಅಲ್ಲದೇ ಕೇಂದ್ರ ಸರ್ಕಾರ ಸಮಾನವಾಗಿ, ಜನಸಂಖ್ಯೆ ಆಧಾರದ ಮೇಲೆ ಲಸಿಕೆ ಪೂರೈಸುತ್ತಿದೆ. ರಾಜ್ಯ ಸರ್ಕಾರ ಪ್ಯಾರ್ಲಲ್ ಆಗಿ ಲಸಿಕೆ ನೀಡುತ್ತೇವೆ. ಲಸಿಕೆ ಪಡೆಯೋದ್ರಿಂದ ಮುಂದೆ ಸೋಂಕಿನಿಂದ ತಪ್ಪಿಸಿಕೊಳ್ಳಬಹುದು. 3ನೇ ಅಲೆ ಬರುವುದನ್ನ ತಡೆಯಲು ದೊಡ್ಡ ಮಟ್ಟದ ಸಿದ್ಧತೆ ಆಗಬೇಕು. ಯಾವುದೋ ಹಂತದಲ್ಲಿ ನಾವು ಸ್ವಲ್ಪ ಪ್ರಮಾಣದ ತ್ಯಾಗಕ್ಕೆ ಸಿದ್ಧವಾಗಬೇಕು. ಸಂಪೂರ್ಣ 14 ದಿನ ಚೈನ್ ಬ್ರೇಕ್ ಹಾಕಲು ಈ ಕ್ರಮ ಅನಿವಾರ್ಯ. ಸರ್ಕಾರದ ಜೊತೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.