ಕ್ಯಾನ್ಸರಿನ ಪರೀಕ್ಷೆ ಜಾಗೃತಿ ಅಭಿಯಾನಕ್ಕೆ ಡಾ.ಕೆ.ಸುಧಾಕರ್ ಚಾಲನೆ @sudhakar #drksudhakar #bjp @bjp #karnatakastategovernment @karnataka state government
ಸರ್ವಿಕಲ್ ಕ್ಯಾನ್ಸರಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಸಂಪೂರ್ಣ ಮಾಹಿತಿಯನ್ನು ನೀಡಿ ಅದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಹಾಗೂ ಆರೋಗ್ಯ ಶಿಕ್ಷಣ ಇಲಾಖೆಯು ಹಿಮೋಜೆನೋಮಿಕ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಅಭಿಯಾನಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬುಧವಾರ ವಿಧಾನಸೌಧದದಲ್ಲಿ ಚಾಲನೆ ನೀಡಿದರು.
ಪಿಎಚ್ ಸಿಗಳನ್ನು ಗಟ್ಟಿಗೊಳಿಸಲು ರಾಜ್ಯ ಸರ್ಕಾರ ಕ್ರಮ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಈ ಕಾರ್ಯಕ್ರಮದ ಮೂಲ ಉದ್ದೇಶ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ತಡಗಟ್ಟುವಿಕೆ ಹೇಗೆ ಸಾಧಿಸಬಹುದು ಮತ್ತು ಪ್ರತ್ಯೇಕವಾಗಿ ಮಹಿಳೆಯರಲ್ಲಿ ಉಂಟಾಗುವ ಎಲ್ಲಾ ಕ್ಯಾನ್ಸರುಗಳ ಪೈಕಿ, ಈ ಸರ್ವಿಕಲ್ ಕ್ಯಾನ್ಸರ್ ಮಾತ್ರ ಸರಿಯಾದ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಿದಲ್ಲಿ ತಡೆಗಟ್ಟಬಹುದು ಎಂಬುದರ ಬಗ್ಗೆ ಅರಿವು ಮೂಡಿಸುವುದು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ವಿಧಾನ ಸೌಧದ ಎಲ್ಲ ಮಹಿಳಾ ನೌಕರ ಸಹೋದ್ಯೋಗಿಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸರ್ವಿಕಲ್ ಕ್ಯಾಸರಿನ ಸುಧೀರ್ಗ ಮಾಹಿತಿಯನ್ನು ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.