ಲಂಡನ್: ಥೇಮ್ಸ್ ನದಿಯ ದಂಡೆ ಮೇಲೆ ಬಸವಣ್ಣನ ಪ್ರತಿಮೆ ಸ್ಥಾಪಿಸಿ ರಾಜ್ಯದ ಹಿರಿಮೆ ಸಾರಿದ್ದ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
“ನಾನು ತೀವ್ರವಾದ ಚಳಿ ಜ್ವರದಿಂದ, ಚೆಸ್ಟ್ ಇನ್ ಫೆಕ್ಷನ್ ನಿಂದ ಬಳಲುತ್ತಿದ್ದೇನೆ. ಕೋವಿಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಸದ್ಯ ನಾನು ಎಲ್ಲರಿಂದ ದೂರವುಳಿದು, ಒಂಟಿಯಾಗಿ ಬದುಕುವ ಮೂಲಕ ಬೇರೆಯವರಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿದ್ದೇನೆ.
ನನ್ನಲ್ಲಿ ಆಯಂಟಿಬಾಡೀಸ್ ಇರುವುದರಿದಾಗಿ ಗುಣಮುಖನಾಗಿ ಮತ್ತೆ ಕೆಲಸಕ್ಕೆ ಹೋಗುತ್ತೇನೆ ಎನ್ನುವ ವಿಶ್ವಾಸವಿದೆ, ಅಲ್ಲದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವಲ್ಲಿ ನಾನು ವಿಫಲನಾದೆ ಎನಿಸುತ್ತಿದೆ” ಎಂದು ಡಾ. ನೀರಜ್ ಪಾಟೀಲ್ ಅವರು ಹೇಳಿಕೊಂಡಿದ್ದಾರೆ.
ಇನ್ನು ನೀರಜ್ ಅವರಿಗೆ ಕೊರೊನಾ ಬಂದಿರುವ ಬಗ್ಗೆ ನಾಡೋಜ ಡಾ. ಮಹೇಶ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ನನ್ನ ಆತ್ಮೀಯ ಸ್ನೇಹಿತ ಡಾ. ನೀರಜ್ ಪಾಟೀಲ್, ಕೊರೊನಾ ಸೋಂಕಿಗೆ ಒಳಗಾಗಿ ಕ್ವಾರಂಟೈನ್ ನಲ್ಲಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಅಂತಾ ನಾವೆಲ್ಲ ಆ ಭಗವಂತನಲ್ಲಿ ಪ್ರಾರ್ಥಿಸೋಣ ಅಂತಾ ಹೇಳಿದ್ದಾರೆ.








