Dr. Shivarajkumar – ಶಿವಣ್ಣನಿಗೆ ಅರ್ಜುನ್ಯ ಜನ್ಯ ಆಕ್ಷನ್ ಕಟ್ – ಚಿತ್ರ 45 ಎಂದು ಟೈಟಲ್…
ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ 60 ನೇ ವರ್ಷದ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ವಯಸ್ಸು 60 ಆದರೂ 30ರ ಎನರ್ಜಿ ಹೊಂದಿರುವ ಶಿವಣ್ಣ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ನೆಚ್ಚಿನ ನಟನ ಹೊಸ ಚಿತ್ರದ ಅಪ್‌ಡೇಟ್ಸ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ತಮ್ಮ ಮ್ಯಾಜಿಕಲ್ ಕಂಪೋಸಿಂಗ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಕನ್ನಡ ಚಿತ್ರರಂಗದ ಲೆಜೆಂಡ್ ಶಿವರಾಜ್‌ಕುಮಾರ್ ಅರ್ಜುನ್ ಜನ್ಯ ಡೈರೆಕ್ಷನ್ ಮಾಡುತ್ತಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ ಶಿವಣ್ಣ ಅಭಿನಯದ ಚಿತ್ರದ ಟೈಟಲ್ ನ್ನ ಇಮದು ಅನೌನ್ಸ್ ಮಾಡಲಾಗಿದೆ. ಚಿತ್ರಕ್ಕೆ `45’ಎಂದು ಹೆಸರಿಡಲಾಗಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಮೂಡಿ ಬರಲಿರುವ ಚಿತ್ರದ ಟೈಟಲ್ ಅನ್ನು ಕನ್ನಡದಲ್ಲಿ ಶಿವಣ್ಣ ಅನಾವರಣ ಮಾಡಿದ್ದಾರೆ. Dr. Shivarajkumar – Arjunya Janya Action Cut for Shivanna
ತಮ್ಮ ಚೊಚ್ಚಲ ಚಿತ್ರದಲ್ಲೇ ಅರ್ಜುನ್ ಜನ್ಯ ಯಾವ ರೀತಿ ಕಥೆ ಹೇಳಬಹುದು ಎನ್ನುವ ಕುತೂಹಲವೂ ಇದೆ. ಈ ಚಿತ್ರಕ್ಕೆ ಎಂ. ರಮೆಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಚಿತ್ರ ಇತರ ಮಾಹಿತಿಗಳು ಕಲಾವಿದರ ಬಗ್ಗೆ ತಿಳಿದಬರಲಿದೆ.