Draupadi Murmu | ಹುಬ್ಬಳ್ಳಿಗೆ ರಾಷ್ಟ್ರಪತಿ – ರಸ್ತೆಗೆ ತೇಪೆ, ಸುಣ್ಣ ಬಣ್ಣ
ಹುಬ್ಬಳ್ಳಿ : ಇದೇ ಸೆಪ್ಟೆಂಬರ್ 26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.
ಅವರು ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಗರದ ಹದಗೆಟ್ಟ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಕ್ಕಿದೆ. ಸ್ವಚ್ಛತಾ ಕೆಲಸಗಳು ಭರದಿಂದ ಸಾಗಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಆಗಮಿಸುವ ಗೋಕುಲ ರಸ್ತವಿಮಾನ ನಿಲ್ದಾಣದಿಂದ ದೇಶಪಾಂಡೆ ನಗರದ ಜಿಮ್ಖಾನ ಮೈದಾನದವರೆಗಿನ ಮಾರ್ಗಗಳಲ್ಲಿರುವ ತಗ್ಗು– ಗುಂಡಿಗಳನ್ನು ಪಾಲಿಕೆಯು ಸಮರೋಪಾದಿಯಲ್ಲಿ ಮುಚ್ಚುತ್ತಿದೆ.
ಹಳೇ ವಿದ್ಯುತ್ ಕಂಬಗಳನ್ನು ತೆರವು ಮಾಡುತ್ತಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹೊಸ ಕಂಬಗಳನ್ನು ಅಳವಡಿಸುತ್ತಿದೆ.
ನೆಲ ಕಚ್ಚಿದ್ದ ಮೈದಾನದ ಬಳಿ ಹರಿಯುವ ನಾಲೆಯ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಮೈದಾನದ ಸುತ್ತಲೂ ಇರುವ ರಸ್ತೆಗಳ ಬದಿಯ ಕಳೆಗಳನ್ನು ಕಿತ್ತು ಹಾಕಿ, ದೂಳನ್ನು ಗುಡಿಸಿ ಸ್ವಚ್ಛಗೊಳಿಸಲಾಗುತ್ತಿದೆ.
ಪೌರ ಸನ್ಮಾನ ಸಮಾರಂಭದ ವೇದಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಧಾರವಾಡದ ಐಐಐಟಿ ಆಡಳಿತ ಮಂಡಳಿಯ ಚೇರ್ಮನ್ ಸುಧಾಮೂರ್ತಿ ಹಾಗೂ ಮತ್ತೊಬ್ಬ ಪ್ರಮುಖ ಅತಿಥಿ ಸೇರಿದಂತೆ ಒಟ್ಟು 6 ಮಂದಿಗೆ ಆಸನ ಕಾಯ್ದಿರಿಸಲಾಗಿದೆ.