ಕೊಲ್ಕತ್ತಾ ನೈಟ್ ರೈಡರ್ಸ್.. ಐಪಿಎಲ್ ನ ಬಲಿಷ್ಠ ತಂಡ. ಬಿಗ್ ಹಿಟ್ಟರ್ ಗಳೇ ತಂಡದ ಆಸ್ತಿ.
ಮೊದಲ ಕೆಲ ಐಪಿಎಲ್ ಟೂರ್ನಿಗಳಲ್ಲಿ ಸ್ಟಾರ್ ಆಟಗಾರರ ದಂಡೇ ತಂಡದಲ್ಲಿದ್ರೂ, ಪ್ರಶಸ್ತಿಯನ್ನು ಎತ್ತಿ ಹಿಡಿಯದ ಕೆಕೆಆರ್, 2012ರಲ್ಲಿ ಐಪಿಎಲ್ ಚಾಂಪಿಯನ್ ಆಯ್ತು. ಆ ಆವೃತ್ತಿಯಲ್ಲಿ ಗೌತಮ್ ಗಂಭೀರ್ ನೇತೃತ್ವದಲ್ಲಿ ಕೆಕೆಆರ್ ಐಪಿಎಲ್ ನಲ್ಲಿ ಅತ್ಯುದ್ಭುತ ಪ್ರದರ್ಶನ ನೀಡಿತ್ತು. ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಬಳಿಕ 2014ರಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪರ ಬೊಂಬಾಟ್ ಬ್ಯಾಟಿಂಗ್, ಗೌತಿ ಚಾಣಾಕ್ಷ ನಾಯಕತ್ವದ ಫಲವಾಗಿ ಮತ್ತೆ ಚಾಂಪಿಯನ್ ಪಟ್ಟವೇರಿತು.
ನಂತರದ ಆವೃತ್ತಿಗಳಲ್ಲಿ ಅದ್ಭುತ ಆಟದ ಹೊರತಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸದ ಕೆಕೆಆರ್, ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ತಂಡ ಹೀಗಿದೆ
ಕೆಕೆಆರ್ ತಂಡದಲ್ಲಿ ಹೆಸರಾಂತ ಬಿಗ್ ಹಿಟ್ಟಿಂಗ್ ಬ್ಯಾಟ್ಸ್ ಮನ್ ಗಳಿದ್ದಾರೆ. ರಸೆಲ್, ಮಾರ್ಗನ್, ನರೈನ್, ದಿನೇಶ್ ಕಾರ್ತಿಕ್ ರಂತಹ ಮ್ಯಾಚ್ ವಿನ್ನರ್ ಗಳಿದ್ದಾರೆ. ಇವರನ್ನು ಹೊರತು ಪಡಿಸಿದರೇ ಉಳಿದ ಬ್ಯಾಟ್ ಮೆನ್ ಗಳು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಬೇಕಿದೆ.
ಬ್ಯಾಟ್ಸ್ ಮೆನ್ ಗಳು : ದಿನೇಶ್ ಕಾರ್ತಿಕ್ (ಕೀಪರ್/ ನಾಯಕ) , ಇಯಾನ್ ಮಾರ್ಗನ್, ನಿತೀಶ್ ರಾಣಾ, ರಾಹುಲ್ ತ್ರಿಪಾತಿ, ರಿಂಕು ಸಿಂಗ್, ಶುಭ್ ಮನ್ ಗಿಲ್, ಸಿದ್ದೇಶ್ ಲಡ್.
ಬೌಲಿಂಗ್ ಲೈನ್ : ಪ್ರಾಸಿಧ್ ಕ್ರಿಷ್ಣ, ಸಂದೀಪ್ ವಾರಿಯರ್, ಶಿವಮ್ ಮವಿ, ವರುಣ್ ಚಕ್ರವರ್ತಿ, ಅಲಿ ಖಾನ್, ಕಮಲೇಶ್ ನಗರ್ ಕೊತಿ, ಕುಲದೀಪ್ ಯಾದವ್, ಪಾಟ್ ಕಮ್ಮಿನ್ಸ್, ಲುಕೀ ಪರ್ಗುಸನ್.
ಆಲ್ ರೌಂಡರ್ಸ್: ಆಂಡ್ರ್ಯೂ ರಸೆಲ್, ಕ್ರೀಸ್ ಗ್ರೀನ್, ಮಣಿಮಾರನ್ ಸಿದ್ದಾರ್ಥ್, ಸುನೀಲ್ ನರೈನ್,
ವಿಕೆಟ್ ಕೀಪರ್ಸ್ : ನಿಖಿಲ್ ನಾಯಕ್, ಟಾಮ್ ಬೆನ್ ಟೆನ್.
ಕೋಚ್ – ಬ್ರೆಂಡನ್ ಮೆಕುಲಮ್.
ಸಹಾಯಕ ಕೋಚ್- ಅಭಿಷೇಕ್ ನಾಯರ್.
ಬೌಲಿಂಗ್ ಕೋಚ್- ಕೈಲ್ ಮಿಲ್ಸ್.
ಮೆಂಟರ್- ಡೇವಿಡ್ ಹಸ್ಸಿ
ಫೀಲ್ಡಿಂಗ್ ಕೋಚ್- ಜೇಮ್ಸ್ ಫೊಸ್ಟರ್.