ಇಂಡಿಯನ್ ಪ್ರಿಮಿಯರ್ ಲೀಗ್ ನ ‘ರಜಿನಿ ಕಾಂತ್’ ಆರ್ ಸಿಬಿ ಇಂದಿಗೂ ಎಂದೆಂದಿಗೂ ಟ್ರೋಫಿ ಗೆಲ್ಲುವ ಹಾಟ್ ಫೇವರೇಟ್ ತಂಡ. ಎಷ್ಟೇ ಪಂದ್ಯಗಳನ್ನು ಸೋತರೂ ಕನ್ನಡಿಗರು ಆರ್ ಸಿಬಿಯನ್ನು ಬಿಟ್ಟುಕೊಡುವ ಚಾನ್ಸೇ ಇಲ್ಲ. ಸದ್ಯ ಐಪಿಎಲ್ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿರುವ ಫ್ಯಾನ್ಸ್ ಫಾಲೋಯಿಂಗ್ ಬೇರ್ಯಾವ ತಂಡಕ್ಕೂ ಇಲ್ಲ. ಆರ್ ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಸೋತಿರಬಹುದು ಆದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡುವುದರಲ್ಲಿ ಎಂದೂ ಸೋತ್ತಿಲ್ಲ. ಆರ್ ಸಿಬಿ ಪಂದ್ಯ ಅಂದ್ರೆ ಅದು ಪೂರಾ ಫೈಸಾ ವಸೂಲ್ ಅಷ್ಟೆ. ಅಲ್ಲಿ ಸೂಪರ್ ಸ್ಟಾರ್ ಗಳ ಮಾಸ್ ಎಂಟ್ರಿ ಇರುತ್ತೆ, ಕ್ರೀಡಾಭಿಮಾನಿಗಳ ಎದೆಬಡಿತ ಹೆಚ್ಚಿಸುವ ಕ್ಲೈಮ್ಯಾಕ್ಸ್ ಇರುತ್ತೆ. ಆರ್ ಸಿಬಿ ಪಂದ್ಯ ಅಂದ್ರೆ ಔಟ್ ಅಂಡ್ ಔಟ್ ಬಿಗ್ ಬಜೆಟ್ ಕಮರ್ಷಿಯಲ್ ಸಿನಿಮಾ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಅಂದಹಾಗೆ ಆರ್ ಸಿಬಿಯನ್ನ ಐಪಿಎಲ್ ನ ರಜಿನಿ ಕಾಂತ್ ಅನ್ನಲು ಕಾರಣ, ಅದಕ್ಕಿರುವ ಫ್ಯಾನ್ಸ್ ಫಾಲೋಯಿಂಗ್. ಹೇಗೆ ರಜಿನಿಕಾಂತ್ ಫ್ಲಾಪ್ ಸಿನಿಮಾ ನೀಡಿದರೂ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗುವುದಿಲ್ಲವೋ, ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟೇ ಪಂದ್ಯ ಸೋತರೂ ಫ್ಯಾನ್ಸ್ ಕಡಿಮೆ ಆಗೋದಿಲ್ಲ.
ಪ್ಲೇ ಬೋಲ್ಡ್ ಆರ್ ಸಿಬಿ
ಯುಎಸಿನಲ್ಲಿ ಸದ್ಯ ಐಪಿಎಲ್ ಹಂಗಾಮಕ್ಕೆ ದಿನಗಣನೆ ಶುರುವಾಗಿದೆ. ಏತನ್ಮಧ್ಯೆ ಆರ್ ಸಿಬಿ ತಂಡದ ಆಂಥಮ್ ಸಾಂಗ್ ಬಿಡುಗಡೆಯಾಗಿದ್ದು, ಯುಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. “ಹುವಾ ಎ ಒ ಆರ್ಸಿಬಿ, ಏನೇ ಬರಲಿ ಆರ್ಸಿಬಿ. ಹುವಾ ಎ ಒ ಆರ್ಸಿಬಿ, ಎಂಥೆ ಇರಲಿ ಆರ್ಸಿಬಿ” ಎಂಬ ಸಾಂಗ್ ಸೋಶಿಯಲ್ ಮೀಡಿಯಾಗೆ ಬೆಂಕಿ ಹೊತ್ತಿಸಿದೆ. ಆರ್ ಸಿಬಿ ಅಭಿಮಾನಿಗಳು ಆರ್ ಸಿಬಿ ಸಾಂಗ್ ಅನ್ನು ಲೈಕ್ ಶೇರ್ ಮಾಡುತ್ತ ಸಂಭ್ರಮಿಸುತ್ತಿದ್ದಾರೆ.