ಆಕಾಶದೆತ್ತರಕ್ಕೆ ಸಕ್ಸಸ್ ಕಂಡು ಅಷ್ಟೇ ಆಳವಾಗಿ ಟೀಕೆಗೆ ಗುರಿಯಾಗಿರುವ ಡ್ರೋನ್ ಪ್ರಾತಾಪ್ ಅವರು ನೆಟ್ಟಿಗರ ಟೀಕೆಗೆ ಮಾಡಿರುವ ರಿಪ್ಲೈ ಒಂದು ಇದೀಗ ಭಾರೀ ಅಚ್ಚರಿ ಮೂಡಿಸಿದೆ. ಡ್ರೋನ್ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರನ್ನು ಯಾಮಾರಿಸಿದ್ದ ಡ್ರೋನ್ ಪ್ರತಾಪ್ ರಿಗೆ ನೆಟ್ಟಿಗರು ತರಹೇವಾರಿ ವ್ಯಂಗ್ಯ ಟ್ವೀಟ್ ಗಳ ಮೂಲಕ ಜಡಿಯುತ್ತಿದ್ದಾರೆ. ಅದರಲ್ಲಿ ಒಬ್ಬರು ನೀವು ಬಿಜೆಪಿಗೆ ಸೇರಿ ನಿಮ್ಮ ಹಿಂದಿನ ಪಾಪಗಳೆಲ್ಲಾ ನಾಶವಾಗುತ್ತವೆ ಎಂದಿದ್ದಾರೆ. ಆದ್ರೆ ಇದಕ್ಕೆ ಪ್ರಯಿಕ್ರಿಯಿಸಿರುವ ಡ್ರೋನ್ ನಾನು ಭವಿಷ್ಯ ಭಾರತದ ಪ್ರಧಾನಮಂತ್ರಿ ರಾಹುಲ್ ಗಾಂಧಿಯವರ ಅಭಿಮಾನಿ ( no, never… im fan of feature prime minister rahul gandhi ) ಎಂದು ರಾಹುಲ್ ಗಾಂಧಿ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಇದೇ ವೇಳೆ ಮತ್ತೋರ್ವ ನೆಟ್ಟಿಗ ಡ್ರೋನ್ ಸಂಬಂಧಿಸಿದ ಲಿಫ್ಟ್ ಆಯಂಡ್ ಡ್ರ್ಯಾಗ್ ಎಂದರೇನು? ಎಂದು ಮಾಡಿದ್ದ ಟ್ವೀಟ್ ಗೆ ಉತ್ತರಿಸಿರುವ ಪ್ರತಾಪ್ ನಿಮಗೆ ಗೊತ್ತಿದ್ದರೆ, ನೀವೇ ಏಕೆ ವಿವರಿಸಬಾರದು ಎಂದು ಹೇಳುವ ಮೂಲಕ ಮತ್ತಷ್ಟು ಟೀಕೆಗೆ ಗುರಿಯಾಗಿದ್ದಾರೆ.