ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು 33ನೇ ಸಿಸಿಹೆಚ್ ನ್ಯಾಯಾಲಯ ಸೆ.14ರವರೆಗೆ(ಸೋಮವಾರ) ಮುಂದೂಡಿದೆ.
ನಟಿ ರಾಗಿಣಿ ಪರ ವಕೀಲರು ಜಾಮೀನು ಕೋರಿ ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್ಗೆ ನಿನ್ನೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ದಾಖಲಿಸಿಕೊಂಡಿದ್ದ ಕೋರ್ಟ್ ಇಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು.
ಇಂದು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಸಿಸಿಬಿ ಪೊಲೀಸರಿಗೆ ನೋಟಿಸ್ ನೀಡಿದೆ. ಕೋರ್ಟ್ ನೀಡಿದ ನೋಟಿಸ್ಗೆ ಸಿಸಿಬಿ ಪೊಲೀಸರು ಉತ್ತರ ನೀಡಬೇಕು ಅಥವಾ ಆಕ್ಷೇಪಣೆ ಸಲ್ಲಿಸಬೇಕು. ಪ್ರಕರಣದ ತನಿಖೆ ಕುರಿತ ಕೇಸ್ ಡೈರಿಯನ್ನು ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದ್ದು, ನಟಿ ರಾಗಿಣಿಗೆ ಸೆ.14ರವರೆಗೆ ಬಿಡುಗಡೆಯ ಭಾಗ್ಯವಾಗಲಿ, ರಿಲೀಫ್ ಆಗಲಿ ಸಿಕ್ಕಿಲ್ಲ.
ಆರೋಪಿಯು ಪೊಲೀಸರ ಕಸ್ಟಡಿಯಲ್ಲಿರುವಾಗ ಕೋರ್ಟ್ಗಳು ಜಾಮೀನು ಕೊಡಲು ಬರುವುದಿಲ್ಲ. ಇಂದು ಎನ್ಡಿಪಿಎಸ್ ಕೋರ್ಟ್ನಲ್ಲಿ ರಾಗಿಣಿ ಸಿಸಿಬಿ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ವಿಚಾರಣೆ ಇದೆ. ಒಂದು ವೇಳೆ ಎನ್ಡಿಪಿಎಸ್ ಕೋರ್ಟ್ ರಾಗಿಣಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರೆ ಮಾತ್ರ ಜಾಮೀನು ವಿಚಾರಣೆ ಕೈಗೆತ್ತಿಕೊಳ್ಳಲು ಮತ್ತೊಂದು ಕೋರ್ಟ್ಗೆ ಅವಕಾಶ ಇದೆ. ಈ ಕಾರಣಕ್ಕೆ ಇಂದು ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂಡೂಡಿದೆ.
ಅಲ್ಲು ಅರ್ಜುನ್ ಮನೆ ಮೇಲೆ ದಾಳಿ:ಕಲ್ಲು-ಟೊಮೆಟೊ ಎಸೆದು ಆಕ್ರೋಶ ದಾಳಿ ಮಾಡಿದ್ದು ಯಾರು..?
ಪುಷ್ಪ-2 ಸಿನಿಮಾ ಬಿಡುಗಡೆಯಾದಾಗಿನಿಂದ ತೆಲುಗು ನಟ ಅಲ್ಲು ಅರ್ಜುನ್ಗೆ ಸಂಕಷ್ಟ ಮೇಲೆ ಸಂಕಷ್ಟ ಎದುರಾಗುತ್ತಲೇ ಇದೆ. ಸಂಧ್ಯಾ ಥಿಯೇಟರ್ನಲ್ಲಿ ಸಂಭವಿಸಿದ ಕಾಲ್ತುಳಿತ ಖಂಡಿಸಿ ಹೈದರಾಬಾದ್ನಲ್ಲಿರುವ ಅಲ್ಲು ಅರ್ಜುನ್...