ಮಂಗಳೂರು: ಬಾಲಿವುಡ್ ನಟ ಹಾಗೂ ಡ್ರಗ್ಸ್ ಪೆಡ್ಲರ್ ಡ್ಯಾನ್ಸರ್ ಕಿಶೋರ್ ಶೆಟ್ಟಿಯ ಡ್ರಗ್ಸ್ ಜಾಲದ ಬೆನ್ನತ್ತಿರುವ ಮಂಗಳೂರು ಸಿಸಿಬಿ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ.
ಡ್ರಗ್ಸ್ ತನಿಖೆ ಮುಂದುವರೆಸಿರುವ ಮಂಗಳೂರು ಸಿಸಿಬಿ ಪೊಲೀಸರು ಮಣಿಪುರಿ ಮೂಲದ ಆಸ್ಕಾ ಎಂಬ ಯುವತಿ ಅರೆಸ್ಟ್ ಮಾಡಿದ್ದಾರೆ. ಆಸ್ಕಾ, ಕಿಶೋರ್ ಶೆಟ್ಟಿ ನಡೆಸುತ್ತಿದ್ದ ಡ್ರಗ್ಸ್ ಪಾರ್ಟಿಗಳಲ್ಲಿ ಯುವತಿಯರನ್ನು ಕರೆದುಕೊಂಡು ಬರುತ್ತಿದ್ದಳು. ಆಸ್ಕಾ ಮಂಗಳೂರಿನ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಕಿಶೋರ್ ಶೆಟ್ಟಿ ಗರ್ಲ್ ಫ್ರೆಂಡ್ ಅಂತೆ. ಕಿಶೋರ್ ಶೆಟ್ಟಿ ಜೊತೆ ಡ್ರಗ್ಸ್ ಪಾರ್ಟಿ ಮಾಡಿದ್ದಳು ಎನ್ನಲಾಗಿದೆ.
ಈಕೆಯನ್ನು ಬಂಧಿಸಿ ಡ್ರಗ್ಸ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಣಿಪುರ ಯುವತಿ ಆಸ್ಕಾ ಸ್ಪಾಗೆ ಬರುತ್ತಿದ್ದ ಸ್ನೇಹಿತೆಯರನ್ನೂ ಡ್ರಗ್ ಪಾರ್ಟಿಗೆ ಕರೆದುಕೊಂಡು ಬರುತ್ತಿದ್ದಳು. ಈ ಹಿನ್ನೆಲೆಯಲ್ಲಿ ಆಸ್ಕಾಳ ಯುವತಿಯರಿಗೆ ನೋಟಿಸ್ ನೀಡಲು ತಯಾರಿ ನಡೆದಿದ್ದು ಮಂಗಳೂರು ಪೊಲೀಸರಿಂದ ತನಿಖೆ ಮುಂದುವರಿದಿದೆ.
ಕಾಂಗ್ರೆಸ್ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ವೋಟ್ ಬ್ಯಾಂಕ್ ಗಾಗಿ ದೇಶದ್ರೋಹಿಗಳಿಗೆ ಕಾಂಗ್ರೆಸ್ ರಕ್ಷಣೆ ಎಂದು ಛಲವಾದಿ ಆಕ್ರೋಶ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಗ್ಯುದ್ಧ ಈಗ ತಾರಕಕ್ಕೇರಿದ್ದು, ಪರಸ್ಪರ ವೈಯಕ್ತಿಕ ನಿಂದನೆ ಮತ್ತು ಗಂಭೀರ ಆರೋಪಗಳ ಸುರಿಮಳೆಯೇ ನಡೆಯುತ್ತಿದೆ. ಕೆಪಿಸಿಸಿ...








