ಹುಬ್ಬಳ್ಳಿ: ಡ್ರಗ್ಸ್ ಜಾಲದ ಬಗ್ಗೆ ಇಂದ್ರಜಿತ್ ಲಂಕೇಶ್ ಸಿಡಿಸಿದ ಬಾಂಬ್‍ನ ಶಾಕ್‍ನಿಂದ ಸ್ಯಾಂಡಲ್‍ವುಡ್ ಮಂದಿ ಹೊರಬರುವ ಮುನ್ನವೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಜನ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳಿ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ. ಡ್ರಗ್ಸ್ ವ್ಯವಹಾರ ರಾಜ್ಯದಲ್ಲಿ ಜೋರಾಗಿದೆ. ಈಗ ಕನ್ನಡ ಚಿತ್ರರಂಗವನ್ನು ಬಿಟ್ಟಿಲ್ಲ. ಹಲವಾರು ಜನ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿದ್ದು, ಇದರ ಮೂಲ ಹುಡುಕುವ ಕೆಲಸ ಪೆÇಲೀಸ್ ಇಲಾಖೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡೋರನ್ನ ಬಂಧಿಸಿದ್ದಾರೆ. ಇದರಲ್ಲಿ ಕೆಲವು ಚಿತ್ರರಂಗದವರಿದ್ದಾರೆ ಅನ್ನೋ ಮಾಹಿತಿ ಇದೆ ಎಂಬ ವಿಚಾರವನ್ನು ಗ್ರಹ ಸಚಿವರು ಬಿಚ್ಚಿಟ್ಟಿದ್ದಾರೆ. ಡಾರ್ಕ್‍ನೆಟ್ ಆನ್‍ಲೈನ್ ವೆಬ್‍ಸೈಟ್‍ಗಳಿಂದ ಪೆÇೀಸ್ಟಲ್ ಮೂಲಕ ಡ್ರಗ್ಸ್ ಸಾಗಾಣಿಕೆ ಆಗುತ್ತಿತ್ತು ಎಂಬ ಮಾಹಿತಿಯನ್ನು ಪೆÇಲೀಸರು ಕಲೆ ಹಾಕಿದ್ದಾರೆ. ಇದರಲ್ಲಿ ಯಾರೇ ಭಾಗಿಯಾಗಿದ್ದರು ಅವರನ್ನು ಬಿಡುವ ಪ್ರಶ್ನೆ ಇಲ್ಲ ಎಂದು ತಿಳಿಸಿದ್ದಾರೆ.
ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‍ಗಳಲ್ಲೂ ಡ್ರಗ್ಸ್ ಬಳಕೆ ಆಗುತ್ತಿರುವ ಬಗ್ಗೆ ದೂರುಗಳಿವೆ. ಸಿಸಿಬಿಗೆ ಕೂಲಂಕುಶವಾಗಿವಾಗಿ ತನಿಖೆ ಮಾಡಲು ಹೇಳಿದ್ದೇವೆ. ಚಿತ್ರರಂಗ ಇರಲಿ, ಇನ್ಯಾವುದೇ ಇರಲಿ ನಾವು ಬಿಡುವುದಿಲ್ಲ. ಡ್ರಗ್ಸ್ ಮೂಲವನ್ನು ಸಂಪೂರ್ಣ ಕೆದಕಲು ಎಲ್ಲಾ ರೀತಿಯ ಪ್ಲ್ಯಾನ್ ಮಾಡಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.








