ಒಟಿಟಿ , ಟಿವಿಯಲ್ಲಿ ಹೊಸ ದಾಖಲೆ ಬರೆದ ‘ದೃಶ್ಯಂ 2’
2021 ಫೆಬ್ರವರಿಯಲ್ಲಿ ಒಟಿಟಿಯಲ್ಲಿ ‘ದೃಶ್ಯಂ 2’ ಸಿನಿಮಾ ರಿಲೀಸ್ ಆಗಿ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.. ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಕೆಲ ದಿನಗಳ ಹಿಂದೆಯಷ್ಟೇ ಟಿವಿಯಲ್ಲೂ ಪ್ರಸಾರವಾಗಿದ್ದು, ದಾಖಲೆ ಬರೆದಿದೆ.. ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸಸ್ಪೆನ್ಸ್ , ಥ್ರಿಲ್ಲರ್ ಟ್ವಿಸ್ಟ್ ಗಳಿಂದ ಸಿನಿಮಾ ಪ್ರೇಕ್ಷಕರನ್ನ ಆಕರ್ಷಿಸಿಸಿತ್ತು.
ಅಂದ್ಹಾಗೆ ಮೇ 21 ರಂದು ಮೋಹಲ್ ಲಾಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಈ ಸಿನಿಮಾವನ್ನ ಅತಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ರೆಕಾರ್ಡ್ ಸೃಷ್ಟಿ ಮಾಡಿದೆ. ಈವರೆಗೂ ಮಳಯಾಳಂ ಟಿವಿ ಇತಿಹಾಸದಲ್ಲೇ ಯಾವ ಸಿನಿಮಾವಾಗಲಿ , ಕಾರ್ಯಕ್ರಮವಾಗಲಿ ಇಷ್ಟು TRPರೇಟಿಂಗ್ ಪಡೆದಿಲ್ಲ ಎನ್ನಲಾಗಿದೆ. ಈ ಮೂಲಕ ಅತಿ ಹೆಚ್ಚು ರೇಟಿಂಗ್ ಪಡೆಯುತ್ತಿದ್ದ ಪದತ ಪಣಿಕಿಲಿ ಟಿವಿ ಶೋ 2ನೇ ಸ್ಥಾನಕ್ಕೆ ಕುಸಿದಿದೆ.
ಅಂದ್ಹಾಗೆ ಒಟಿಟಿಯಲ್ಲಿ ಮೊದಲ ಬಾರಿ ದೃಶ್ಯಂ ರಿಲೀಸ್ ಆದಾಗ ಅಲ್ಲೂ ಸಹ ಈ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡಿದತ್ತು. ವಿಶ್ವಾದ್ಯಂತ ಅತಿ ಹೆಚ್ಚು ಜನರಿಂದ ನೋಡಲ್ಪಟ್ಟ ಭಾರತೀಯ ಪ್ರದೇಶಿಕ ಭಾಷಾ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇದೀಗ ಟಿವಿಯಲ್ಲೂ ದಾಖಲೆ ಬರೆದಿದೆ..
ಅಂದ್ಹಾಗೆ ದೃಶ್ಯಂ 2 , 2013ರಲ್ಲಿ ತೆರೆಕಂಡ ದೃಶ್ಯಂ ನ ಸೀಕ್ವೇಲ್.. ಈ ಸಿನಿಮಾ ಕನ್ನಡ , ಹಿಂದಿ, ತೆಲುಗಿನಲ್ಲಿಯೂ ರೀಮೇಕ್ ಆಗಿತ್ತು.. ತೆಲುಗಿನಲ್ಲಿ ವೆಂಕಟೇಕ್ , ಕನ್ನಡದಲ್ಲಿ ರವಿಚಂದ್ರನ್.. ಹಿಂದಿಯಲ್ಲಿ ಅಜಯ್ ದೇವಗನ್, ಎಲ್ಲ ಬಾಷೆಗಳಲ್ಲೂ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು.. ಇದೀಗ ದೃಶ್ಯಂ 2 ಸಹ ಕನ್ನಡ, ತೆಲುಗು, ಹಿಂದಿಗೆ ರೀಮೇಕ್ ಆಗ್ತಿದೆ.. ಇನ್ನೂ ಮಳಯಾಳಂನಲ್ಲಿ ದೃಶ್ಯಂ 3 ಸಿನಿಮಾದ ತಯಾರಿ ನಡೆಯುತ್ತಿದೆ..
2013 ರಲ್ಲಿ ದೃಶ್ಯಂ ರಿಲೀಸ್ ಆದಾಗ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು.. ಅಲ್ಲದೇ ಅತಿ ಹೆಚ್ಚು ಭಾಷೆಗಳಿಗೆ ರೀಮೇಕ್ ಆದ ಭಾರತೀಯ ಸಿನಿಮಾ ಎಂಬ ಖ್ಯಾತಿಯೂ ಈ ಸಿನಿಮಾಗಿದೆ.
ಅಂಬಿ ನೆನಪು ಶಾಶ್ವತ : ಸುಮಲತಾ ಅಂಬರೀಶ್
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.