ಬೆಂಗಳೂರು : ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರುನ ಆಗಮನವಾಗಿದ್ದು, ಈ ಕುರಿತು ನಟ ಧ್ರುವ ಸರ್ಜಾ ” ಅತ್ತಿಗೆಗೆ ಗಂಡು ಮಗು ಜನಿಸಿದ್ದು ತುಂಬಾ ಸಂತೋಷವಾಗಿದೆ. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆಗೆ ಇದ್ದ ಫೀಲ್ ಆಯ್ತು. ತುಂಬಾ ಖುಷಿಯಾಯಿತು ಎಂದು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. Dhruva Sarja first reaction on Meghana Raj baby
ಮೇಘನಾ ರಾಜ್ ಅವರಿಗೆ ಮಗು ಆಗಿರುವ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಬಂದ ಧ್ರುವ ಮಗುವನ್ನು ಎತ್ತಿ ಮುದ್ದಾಡಿ, ಸಿಹಿ ಹಂಚಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವ, ಅತ್ತಿಗೆಗೆ ಗಂಡು ಮಗುವಾಗಿದ್ದು, ಆರೋಗ್ಯವಾಗಿದ್ದಾರೆ.ಎಲ್ಲರೂ ಅವರಿಗೆ ಆಶೀರ್ವಾದ ಮಾಡಬೇಕೆಂದು ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ.
ಖುಷಿ ಹೆಚ್ಚಾಗಿದ್ದರಿಂದ ತುಂಬಾ ರೋಮಾಂಚನವಾಗಿತ್ತು. ಹೀಗಾಗಿ ಮಗುವನ್ನು ಕೈಯಲ್ಲಿ ಹಿಡಿದ ತಕ್ಷಣದ ಅನುಭವನ್ನು ಅಂದಾಜಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : ಮಗುವನ್ನು ಎತ್ತಿ ಮುದ್ದಾಡಿದ ಧ್ರುವ ಸರ್ಜಾ
ಆ ಫೀಲ್ ಗೊತ್ತಾಗಲಿಲ್ಲ. ಆದ್ರೆ ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆಗೆ ಇದ್ದ ಫೀಲ್ ಆಯ್ತು ಎಂದರು.
ನಾನು ಅಣ್ಣನಿಗೆ ರೇಗಿಸುತ್ತಿದ್ದೆ. ಮಕ್ಕಳಾಗುತ್ತವೆ ಎಲ್ಲಾ ಓಕೆ, ನಿನ್ನನ್ನು ಪೇರೆಂಟ್ಸ್ ಮೀಟಿಂಗ್ ಕರೆಯುತ್ತಾರಲ್ಲ. ಶಾಲೆಯಲ್ಲಿ ನಿನ್ನ ಮೇಲೆ ಹೆಚ್ಚು ದೂರುಗಳಿದ್ದವು.
ಇನ್ನು ನಿನ್ನ ಮಕ್ಕಳದು ಬೇಜಾನ್ ಇರುತ್ತೆ ಮಚಾ ಎಂದಿದ್ದೆ. ಅವನು ನನಗೆ ಮಗಾನೇ ಆಗೋದು. ಅವನದ್ದು ಸಹ ಶಾಲೆಯಲ್ಲಿ ಬೇಜಾನ್ ದೂರುಗಳಿರುತ್ತವೆ ಎಂದು ಹೇಳಿದ್ದ.
ಹಿಂದೆ ನಾವಿಬ್ಬರು ಮಾತನಾಡಿದ ವಿಚಾರ ಈ ಸಂದರ್ಭದಲ್ಲಿ ನೆನಪಾಗುತ್ತಿದೆ ಎಂದು ಅಣ್ಣನ ನೆನಪು ಮಾಡಿಕೊಂಡರು.
ಇದೇ ವೇಳೆ ಮಗುವಿಗೆ ಹೆಸರಿಡು ವಿಚಾರವಾಗಿ ಮಾತನಾಡಿ ಮಗುವಿಗೆ ಹೆಸರಿಡುವ ಕುರಿತು ಇನ್ನೂ ಯಾವುದೇ ಮಾತುಕತೆ ನಡೆದಿಲ್ಲ.
ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ ಎಂದು ಧ್ರುವ ಸರ್ಜಾ ಹೇಳಿದರು.
ಇದನ್ನೂ ಓದಿ : ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಚಿರುವಿನ ಆಗಮನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel