ಬೆಂಗಳೂರು : ಸರ್ಜಾ ಕುಟುಂಬಕ್ಕೆ ಇಂದು ಜೂನಿಯರ್ ಚಿರುವಿನ ಆಗಮನವಾಗಿದ್ದು, ಧ್ರುವ ಸರ್ಜಾ (Druva sarja) ಜೂನಿಯರ್ ಚಿರಂಜೀವಿಯನ್ನು ಎತ್ತಿ ಮುದ್ದಾಡಿದ್ದಾರೆ.
ನಿನ್ನೆ ನಗರದ ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಮೇಘನಾ ರಾಜ್, ಇಂದು ಬೆಳಿಗ್ಗೆ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಧ್ರುವ ಸರ್ಜಾ ಮಗುವನ್ನು ಎತ್ತಿ ಮುದ್ದಾಡಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಚಿರುವಿನ ಆಗಮನ
ಹಾಗೆ ಆಸ್ಪತ್ರೆಗೆ ಪ್ರಯಾಣಿಸುವ ವೇಳೆಯೇ ಇನ್‍ಸ್ಟಾದಲ್ಲಿ ಧ್ರುವ ಅವರು `ಬಾಯ್ ಬೇಬಿ’ ಜೈ ಹನುಮಾನ್ ಎಂದು ಬರೆದರೆ ಪತ್ನಿ ಪ್ರೇರಣಾ ಅವರು ಮೇಘನಾ ಚಿರು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
ಇನ್ನು ಸುಂದರ್ ರಾಜ್, ಪ್ರಮೀಳಾ , ಪನ್ನಗಾಭರಣ ಹಾಗೂ ಮೇಘನಾ ಸ್ನೇಹಿತರು ಖಾಸಗಿ ಆಸ್ಪತ್ರೆಯ ಬಳಿಯೇ ಇದ್ದು ಮೇಘನಾ ಆರೈಕೆ ಮಾಡುತ್ತಿದ್ದಾರೆ.
ಗಂಡು ಮಗು ಜನನವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಜೊತೆ ಆಸ್ಪತ್ರೆ ಬಳಿ ಚಿರು ಅಭಿಮಾನಿಗಳು ಸಿಹಿ ಹಂಚುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel