ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ದುನಿಯಾ ವಿಜಿ ತಮ್ಮದೇ ಆ ವಿಭಿನ್ನ ಮ್ಯಾನರಿಸಮ್ ನಿಂದ ಖಟ್ಟರ್ , ಡೇರಿಂಗ್ ನಟನಾಗಿ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾರೆ.. ಇತ್ತೀಚೆಗೆ ಅವರೇ ನಿರ್ದೇಶಿಸಿರುವ ಸಲಗ ಸಿನಿಮಾ ಸೂಪರ್ ಹಿಟ್ ಆಗಿದೆ..
ಹೌದು… ಕನ್ನಡದ ಕರಿ ಚಿರತೆ ದುನಿಯಾ ವಿಜಿ ಈ ಟಾಲಿವುಡ್ ಗೆ ಪಾದಾರ್ಪಣೆ ಮಾಡ್ತಿದ್ದು , ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದು , ಈ ಚಿತ್ರದಲ್ಲಿ ವಿಜಿ ನಟನೆ ಖಚಿತವಾಗಿದೆ.. ಈ ವಿಚಾರವನ್ನ ಚಿತ್ರತಂಡವೇ ಅಧಿಕೃತಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ವಿಜಿ ಫೋಟೋ ಹಾಕಿ ಮಾಹಿತಿ ನೀಡಿದೆ..
ಆದ್ರೆ ಸಿನಿಮಾದಲ್ಲಿ ವಿಜಿ ಪಾತ್ರ ಏನು ಅನ್ನೋದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.. ಆದ್ರೆ ಕೆಲ ಮೂಲಗಳು , ವದಂತಿಗಳ ಪ್ರಕಾರ ಸಿನಿಮಾದಲ್ಲಿ ವಿಜಿ ವಿಲ್ಲನ್ ಆಗಲಿದ್ದಾರೆ ಎನ್ನಲಾಗ್ತಿದೆ. ಒಂದ್ ವೇಳೆ ಇದು ನಿಜವೇ ಆದ್ರೆ , ವಿಜಿ ಅವರು ಹೀರೋ ಇಮೇಜ್ ನಿಂದ ವಿಲ್ಲನ್ ಶೇಡ್ ನಲ್ಲಿ ಕಾಣಿಸಿಕೊಳ್ಳೋದು ಒಂದ್ ರೀತಿ ವಿಭಿನ್ನವೂ ಹೌದು.. ಹೊಸ ಪ್ರಯೋಗವೂ ಹೌದು..
ಆದ್ರೆ ಈ ವಿಚಾರ ಅಭಿಮಾನಿಗಳಿಗೆ ಸಂತಸದ ಸುದ್ದಿಯೇ ಆದ್ರೂ , ಫ್ಯಾನ್ಸ್ ಇಷ್ಟು ದಿನ ಹೀರೋ ಆಗಿ ನೋಡ್ತಿದ್ದ ದುನಿಯಾ ವಿಜಿ ಅವರನ್ನ ಈಗ ವಿಲ್ಲನ್ ಆಗಿ ಹೇಗೆ ಎಕ್ಸೆಪ್ಟ್ ಮಾಡ್ತರೆ ಅನ್ನೋದು ಸವಾಲಿನ ವಿಚಾರ..
ಬಾಲಯ್ಯ ಅವರ 107 ನೇ ಸಿನಿಮಾಗೆ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಈ ಸಿನಿಮಾಕ್ಕಾಗಿ ವಿಜಯ್ ಈಗಾಗಲೇ ತಮ್ಮ ಲುಕ್ ಬದಲಾಯಿಸಿಕೊಂಡಿದ್ದು, ವಿಶೇಷ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
Team #NBK107 welcomes Sandalwood Sensation #DuniyaVijay on board for a powerful role 💥💥
NataSimham #NandamuriBalakrishna @shrutihaasan @officialviji @megopichand @MusicThaman pic.twitter.com/AG9epNSS3L
— Mythri Movie Makers (@MythriOfficial) January 3, 2022