ಉಜ್ಜಯಿನಿಯ ಬಾಬಾ ಮಹಕಾಳ್ ದೇವಾಲಯ ಉತ್ಖನನದ ಸಂದರ್ಭದಲ್ಲಿ ಪ್ರಾಚೀನ ಕಲ್ಲುಗಳ ಗೋಡೆ ಪತ್ತೆ Baba Mahakal wall
ಉಜ್ಜಯಿನಿ, ಡಿಸೆಂಬರ್19: ಮಧ್ಯಪ್ರದೇಶದ ಉಜ್ಜಯಿನಿಯ ಬಾಬಾ ಮಹಕಾಳ್ ದೇವಾಲಯ ಸಂಕೀರ್ಣದಲ್ಲಿ ನಡೆಯುತ್ತಿರುವ ಉತ್ಖನನದ ಸಂದರ್ಭದಲ್ಲಿ, ಶುಕ್ರವಾರ ಪ್ರಾಚೀನ ಕಲ್ಲುಗಳ ಗೋಡೆ ಸುಮಾರು 20 ಅಡಿ ಕೆಳಗೆ ಕಂಡುಬಂದಿದೆ. Baba Mahakal wall
ಕಲ್ಲುಗಳನ್ನು ಪ್ರಾಚೀನ ಕಾಲದಲ್ಲಿ ಕೆತ್ತಲಾಗಿದೆ. ಗೋಡೆ ಕಂಡುಬಂದ ನಂತರ, ಉತ್ಖನನ ಕಾರ್ಯವನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ದೇವಾಲಯದ ಆಡಳಿತಕ್ಕೆ ಮಾಹಿತಿ ನೀಡಲಾಗಿದೆ.
ಈ ಗೋಡೆಯ ಮೂಲಕ ಉಜ್ಜಯಿನಿ ಇತಿಹಾಸದ ಬಗ್ಗೆ ಹೊಸ ಮಾಹಿತಿ ಬಹಿರಂಗವಾಗಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಶುಕ್ರವಾರ, ದೇವಾಲಯದ ವಿಸ್ತರಣೆಗಾಗಿ ಸತಿ ಮಾತಾ ದೇವಾಲಯದ ಹಿಂದಿನ ಸವಾರಿ ಮಾರ್ಗದಲ್ಲಿ ಉತ್ಖನನ ಕಾರ್ಯ ನಡೆಯುತ್ತಿತ್ತು. ಏತನ್ಮಧ್ಯೆ, ಉತ್ಖನನದಲ್ಲಿ ಕಲ್ಲಿನ ಗೋಡೆ ಕಂಡುಬಂದಿದೆ.
ನಿತ್ಯಾನಂದನಿಂದ ಕೈಲಾಸಕ್ಕೆ ಭೇಟಿ ನೀಡಲು ಫ್ರೀ ವೀಸಾ, ಊಟ ಮತ್ತು ವಸತಿ ಅಫರ್
ಇದರ ನಂತರ, ಕೆಲಸವನ್ನು ನಿಲ್ಲಿಸಲಾಯಿತು. ಮೊಘಲ್ ಕಾಲದಲ್ಲಿ ಈ ದೇವಾಲಯವನ್ನು ನಾಶ ಪಡಿಸಲಾಗಿದೆ ಎಂದು ದೇವಾಲಯದ ಜ್ಯೋತಿಷಿ ಪಂಡಿತ್ ಆನಂದ್ ಶಂಕರ್ ವ್ಯಾಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮರಾಠಾ ಆಡಳಿತಗಾರರ ಕಾಲದಲ್ಲಿ ಈ ದೇವಾಲಯವನ್ನು ಪುನರ್ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ದೇವಾಲಯವನ್ನು ನೆಲಸಮಗೊಳಿಸಿದಾಗ, ದೇವಾಲಯದ ಹಳೆಯ ಭಾಗವು ಮಣ್ಣಿನಡಿ ಸೇರಿರಬೇಕು. ದೇವಾಲಯದ ಸುತ್ತಲೂ ಪುರಾತತ್ವ ಇಲಾಖೆ ಉತ್ಖನನ ಮಾಡಬೇಕು ಎಂದು ಅವರು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಒಣದ್ರಾಕ್ಷಿ ನೀರನ್ನು ಪ್ರತಿದಿನ ಏಕೆ ಕುಡಿಯಬೇಕು – ಇಲ್ಲಿದೆ ಕಾರಣಗಳು https://t.co/tfLNIph7yp
— Saaksha TV (@SaakshaTv) December 18, 2020
ಭಾರತೀಯ ಸೈನ್ಯದ ಹೆಚ್ಚುತ್ತಿರುವ ಶಕ್ತಿಯಿಂದ ಚಿಂತೆಗೆ ಒಳಗಾದ ಚೀನಾ https://t.co/k7F1OrVQO9
— Saaksha TV (@SaakshaTv) December 18, 2020