ಬೆಂಗಳೂರು: ರಾಜ್ಯದ ಜನರು ಹೊಸ ವರ್ಷ (New Year 2025)ವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಿಲಿಕಾನ್ ಸಿಟಿ ಮಂದಿಯಂತೂ ಕುಣಿದು ಕುಪ್ಪಳಿಸಿ ಬರಮಾಡಿಕೊಂಡಿದ್ದಾರೆ.
ಎಂ.ಜಿ ರಸ್ತೆಯಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. 12 ಗಂಟೆ ವೇಳೆಗೆ ಅದ್ಧೂರಿಯಾಗಿ ಹೊಸ ವರ್ಷವನ್ನು ಜನರು ಬರಮಾಡಿಕೊಂಡರು. ಆದರೆ, ಸಂಭ್ರಮಾಚರಣೆಯ ನಂತರ ಮನೆಗೆ ತೆರಳಲು ಜನರು ಮಾತ್ರ ಪರದಾಟ ನಡೆಸಿದ್ದಾರೆ.
ಕೆಲವು ಯುವಕ, ಯುವತಿಯರು ಮದ್ಯದ ಅಮಲಿನಲ್ಲಿ ತೇಲಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ 11 ಗಂಟೆಗೆ ಎಂ.ಜಿ ರಸ್ತೆಯಿಂದ ಮೆಟ್ರೋ ಸಂಚಾರ ಬಂದಾದ ಹಿನ್ನೆಲೆ ಸಮೀಪದ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣದಿದ ತೆರಳಬೇಕಿತ್ತು. ಇದರಿಂದ ಎಂ.ಜಿ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಜನರನ್ನು ಚದುರಿಸುವುದಕ್ಕಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೋರಮಂಗಲ ಪಬ್ ಸ್ಟ್ರೀಟ್ನಲ್ಲಿ ಮಗುವೊಂದು ತಪ್ಪಿಸಿಕೊಂಡಿತು. ಕೂಡಲೇ ಎಚ್ಚೆತ್ತ ಪೊಲೀಸರು ಕೆಲವೇ ಕ್ಷಣಗಳಲ್ಲಿ ಮಗುವನ್ನು ಪತ್ತೆಮಾಡಿ ಹೆತ್ತವರಿಗೆ ಸೇರಿಸಿದ್ದಾರೆ. ಎಂ.ಜಿ. ರಸ್ತೆಯಲ್ಲಿ ಯುವಕನೋರ್ವ ಕಾಲಿಗೆ ಗಾಯ ಮಾಡಿಕೊಂಡಿದ್ದಾನೆ. ಹೀಗೆ ಹತ್ತಾರು ಗೊಂದಲ, ಗದ್ದಲಗಳ ಮಧ್ಯೆಯೇ ಸಂಭ್ರಮಾಚರಣೆ ನಡೆದಿದೆ.
5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ
ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಐದು ವರ್ಷಗಳ ಒಳಗಾಗಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಸರ್ಕಾರವೇ ವಾಪಸ್ ಪಡೆಯುವುದು ಅಥವಾ...








