ಟಿ-20ಯಲ್ಲಿ ಡ್ವೇನ್ ಬ್ರಾವೋ ನೂತನ ವಿಶ್ವ ದಾಖಲೆ
ದುಬೈ : ಟಿ-20 ಕ್ರಿಕೆಟ್ ನಲ್ಲಿ ವೆಸ್ಟ್ ಇಂಡಿಸ್ ನ ಡ್ವೇನ್ ಬ್ರಾವೋ ನೂತನ ವಿಶ್ವ ದಾಖಲೆ ಬರೆದಿದ್ದಾರೆ.
ಟಿ-20 ಕ್ರಿಕೆಟ್ ಮಾದರಿಯಲ್ಲಿ 550ನೇ ವಿಕೆಟ್ ಕಬಳಿಸುವ ಮೂಲಕ ಡ್ವೇನ್ ಬ್ರಾವೊ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಾವೋ ಈ ಮೈಲಿಗಲ್ಲು ತಲುಪಿದ್ದಾರೆ.
ಟಿ-20 ಕ್ರಿಕೆಟ್‌ನಲ್ಲಿ 550 ವಿಕೆಟ್ ಗಳಿಸಿದ ವಿಶ್ವದ ಮೊಟ್ಟ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅಲ್ಲದೆ ಟಿ 20 ಕ್ರಿಕೆಟ್ ಮಾದರಿಯಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಕೂಡ ಬ್ರಾವೋ ಆಗಿದ್ದಾರೆ.
ಬ್ರಾವೋ 506 ಪಂದ್ಯದಲ್ಲಿ 550 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಎರಡನೇ ಸ್ಥಾನದಲ್ಲಿದ್ದು, ಒಟ್ಟು 420 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮೂರನೇ ಸ್ಥಾನದಲ್ಲಿ ಸುನಿಲ್ ನಾರಾಯಣ್ 419 ವಿಕೆಟ್, ನಾಲ್ಕನೇ ಸ್ಥಾನದಲ್ಲಿ ರಶೀದ್ ಖಾನ್ 392 ವಿಕೆಟ್, ಐದನೇ ಸ್ಥಾನದಲ್ಲಿ ಲಸಿತ್ ಮಾಲಿಂಗ 390 ವಿಕೆಟ್ ಇದ್ದಾರೆ.