ವೆಲ್ಲಿಂಗ್ಟನ್, ಮೇ 25 : ಸುದ್ದಿವಾಹಿನಿಯೊಂದಕ್ಕೆ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ನ್ಯೂಜಿಲೆಂಡ್ ರಾಜಧಾನಿಯಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ನ್ಯೂಜಿಲೆಂಡ್ ರಾಜಧಾನಿ ವೆಲ್ಲಿಂಗ್ಟನ್ನಲ್ಲಿ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು ಸಂದರ್ಶನ ನೀಡುತ್ತಿದ್ದ ವೇಳೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಿಸಿದೆ. ಪ್ರಧಾನಿ ಜಸಿಂಡಾ ಅರ್ಡರ್ನ್ ಒಮ್ಮೆ ಗಾಬರಿ ಗೊಂಡು ಪುನಃ ಸಂದರ್ಶನವನ್ನು ಮುಂದುವರೆಸಿದರು.
ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು ದೇಶವನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ತೆಗೆದುಕೊಂಡ ಕ್ರಮಗಳು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಮೊದಲು ನ್ಯೂಜಿಲೆಂಡ್ನ ಚರ್ಚ್ನಲ್ಲಿ ನಡೆದ ಮಾಸ್ ಶೂಟಿಂಗ್ ವಿಚಾರದಲ್ಲೂ ಅವರು ತೆಗೆದುಕೊಂಡ ನಿರ್ಧಾರಕ್ಕೆ ಜನಮನ್ನಣೆಗೆ ಪಾತ್ರವಾಗಿತ್ತು. ಸೋಮವಾರ ವಿಲ್ಲಿಂಗ್ಟನ್ ಸುತ್ತಮುತ್ತಲ ಪ್ರದೇಶದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಲೆವಿನ್ ಇದರ ಕೇಂದ್ರಬಿಂದುವಾಗಿತ್ತು. 2011 ರಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, 150 ಮಂದಿ ಮೃತಪಟ್ಟಿದ್ದರು. 2018ರಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿ ಸಾಕಷ್ಟು ಪ್ರಮಾಣದ ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣವಾಗಿತ್ತು.








