ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಲವೇ ಕ್ಷಣಗಳ ಹಿಂದೆ ಭಾರೀ ಭೂಕಂಪನದ ಅನುಭವವಾಗಿದೆ. ದೆಹಲಿ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಮಿ ಕಂಪಿಸಿರುವ ಅನುಭವವಾಗಿರುವ ಬಗ್ಗೆ ಸಾರ್ವಜನಿಕರು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಭಾರಿ ಭೂಕಂಪನ ಆಗುವ ಸಾಧ್ಯತೆ ಇದೆ ಎಂದು ಭೂವಿಜ್ಞಾನಗಳು ಈ ಹಿಂದೆಯೇ ಎಚ್ಚರಿಸಿದ್ದರು.
ಜೂನ್.3ರಂದು ದೆಹಲಿಯಲ್ಲಿ ಮಧ್ಯಮ ಪ್ರಮಾಣದ ಭೂಕಂಪನವಾಗಿತ್ತು. ಅಂದಿನ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.2ರಷ್ಟು ದಾಖಲಾಗಿತ್ತು. ಅದಕ್ಕೂ ಮುಂಚೆ ಏಪ್ರಿಲ್ 12 ಹಾಗೂ ಮೇ.29ರಂದು ಸಣ್ಣ ಪ್ರಮಾಣದಲ್ಲಿ ಭೂಕಂಪನವಾಗಿತ್ತು.
ತಜ್ಞರ ಪ್ರಕಾರ ಸಣ್ಣ ಪ್ರಮಾಣದಲ್ಲಿ ಆದ ಭೂಕಂಪನಗಳು ಮುಂದೆ ದೊಡ್ಡದೊಂದು ಭೂಕಂಪನವಾಗಲಿದೆ ಎಂಬುದರ ಮುನ್ಸೂಚನೆ ಎಂದಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಭೂಕಂಪನದಿಂದ ಯಾವುದೇ ಪ್ರಾಣ-ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ದೆಹಲಿಯಿಂದ 63 ಕಿ.ಮೀ ದೂರದಲ್ಲಿರುವ ಹರಿಯಾಣದ ಗುರುಗ್ರಾಮದಲ್ಲೂ ಭೂಕಂಪನವಾಗಿದೆ. ಈ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.5ರಷ್ಟು ದಾಖಲಾಗಿದೆ.
ಕೂಲಿ ಕೆಲಸ ಮಾಡುತ್ತ NEETನಲ್ಲಿ 677 ಸ್ಕೋರ್: ಇದು ಕಠಿಣ ಪರಿಶ್ರಮದ ಅದ್ಭುತ ಕಥೆ!!
ಕೋಚಿಂಗ್ ಪಡೆಯುತ್ತಾ ದಿನದ 18 ಗಂಟೆಗಳನ್ನು ಅಧ್ಯಯನಕ್ಕೆ ಮೀಸಲಿಟ್ಟರೂ, ಕೆಲವರು NEET ಪರೀಕ್ಷೆಯಲ್ಲಿ ಯಶಸ್ವಿಯಾಗಲು ತೊಂದರೆ ಅನುಭವಿಸುತ್ತಾರೆ. ಆದರೆ, ಪಶ್ಚಿಮ ಬಂಗಾಳದ 21 ವರ್ಷದ ಕಟ್ಟಡ ಕಾರ್ಮಿಕನಾದ...