Earthquake | ಶಿವಮೊಗ್ಗ ಜಿಲ್ಲೆಯಲ್ಲಿ ನಡುಗಿದ ನೆಲ!
ಶಿವಮೊಗ್ಗ : ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಭೂಕಂಪದ ಅನುಭವವಾಗಿದೆ.
ಇಂದು ಬೆಳಿಗ್ಗೆ 3.50 ರಿಂದ 4.00 ಗಂಟೆಯವರೆಗೂ ಭೂಮಿ ನಡುಗಿದ ಅನುಭವವಾಗಿದೆ.
ದೊಡ್ಡ ಮಟ್ಟದ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವವಾಗಿದ್ದು, ಮನೆಗೆ ಗೋಡೆ ಹಂಚುಗಳು ಅಲುಗಾಡಿವೆ.
ಇನ್ನೂ ರಿಕ್ಟರ್ ಮಾಪನದಲ್ಲಿ ಭೂಕಂಪನದ ಅನುಭವ ದಾಖಲಾಗಿದ್ದ 4.1ರಷ್ಟು ತೀವ್ರತೆ ಇದೆ.

ಶಿರಾಳಕೊಪ್ಪದ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡಕ್ಕೂ ಹೆಚ್ಚು ಸಲ ಈ ಅನುಭವವಾಗಿದೆ.
ಭಾರೀ ಶಬ್ದದೊಂದಿಗೆ ಭೂಕಂಪನ ಅನುಭವ ಆಗುತ್ತಿದ್ದಂತೆ ಸುಖ ನಿದ್ದೆಯಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ.
ಮೊದಲಿಗೆ ಭೂಮಿ ಕಂಪಿಸಿದ್ದು, ಇದಾಗಿ ಹತ್ತು ನಿಮಿಷದ ಬಳಿಕ ಮತ್ತೊಮ್ಮೆ ಶಬ್ದ ಕೇಳಿಬಂತು ಎಂದು ಸ್ಥಳೀಯರು ಹೇಳಿದ್ದಾರೆ.