ನವದೆಹಲಿ : ಇಂದು ಈಸ್ಟರ್ ಸಂಡೇ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕ್ರಿಶ್ಚಿಯನ್ ಥರ್ಮೀಯರಿಗೆ ಶುಭ ಕೋರಿದ್ದಾರೆ. ಕೊರೊನಾ ಹೆಮ್ಮಾರಿ ವಿರುದ್ಧದ
ಹೋರಾಟದಲ್ಲಿ ಗೆಲ್ಲಲು ಮತ್ತಷ್ಟು ಶಕ್ತಿ ನೀಡುವಂತೆ ಅವರು ಯೇಸುಕ್ರಿಸ್ತನಲ್ಲಿ ಮನವಿ ಮಾಡಿದ್ದಾರೆ.
“ಈಸ್ಟರ್ ವಿಶೇಷ ಸಂದರ್ಭದಲ್ಲಿ ಕ್ರೈಸ್ತರೆಲ್ಲರಿಗೂ ಶುಭಾಶಯಗಳು, ಬಡವರು ಮತ್ತು ಸಮಾಜದ ದುರ್ಬಲರನ್ನು ಸಬಲೀಕರಣಗೊಳಿಸಲು ಯೇಸು ಕ್ರಿಸ್ತ ಮಾಡಿದ ಉದಾತ್ತ ಸೇವೆ ಮತ್ತು ಮನುಕುಲ ಒಳಿತಿನ ಕೈಂಕರ್ಯಗಳನ್ನು ನಾವು ಸ್ಮರಿಸುತ್ತೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಕೊರೊನಾವನ್ನು ಮಣಿಸಲು ನಮಗೆ ಜೀಸಸ್ ಕ್ರೈಸ್ಟ್ ಮತ್ತಷ್ಟು ಶಕ್ತಿ ನೀಡಲು ಮತ್ತು ನಮ್ಮ ಭೂಮಂಡಲ ಅತ್ಯಂತ ಆರೋಗ್ಯಕರವಾಗಿ ಬೆಳಗುವಂತಾಗಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.








