ಬೇಸಿಗೆಯಲ್ಲಿ ಆರೋಗ್ಯಕ್ಕಾಗಿ ಈ ರೀತಿಯ ಆಹಾರಗಳನ್ನ ಹೆಚ್ಚಾಗಿ ಸೇವಿಸಿ….
ದೇಶದಲ್ಲಿ ಬಿಸಿಲಿನ ಕಾವು ಹೆಚ್ಚಾಗುತ್ತಲೇ ಇದೆ, ಹಲವಡೆ 40 ಡಿಗ್ರಿ ಮಿಂಚಿ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ… ಬದಲಾಗುತ್ತಿರುವ ಋತು ಮತ್ತು ಕಾಲಕ್ಕೆ ತಕ್ಕತೆ ನಾವು ಆಹಾರ ಮತ್ತು ಜೀವನ ಶೈಲಿಯನ್ನ ಬದಲಾಯಿಸಕೊಳ್ಳಬೇಕು. ಈ ಬೇಸಿಗೆಯಲ್ಲಿ ನಿಮ್ಮ ಆರೋಗವ್ಯನ್ನ ಕಾಪಾಡಿಕೊಳ್ಳಲು ಈ ಟಿಪ್ಸ್ ಗಳನ್ನ ತಪ್ಪದೇ ಪಾಲಿಸಿ.
ಲಘು ಆಹಾರ – ಬೇಸಿಗೆಯಲ್ಲಿ ಆಹಾರ ಯಾವಾಗಲು ಮಿತವಾಗಿರಬೇಕು, ಅದರಲ್ಲೂ ಹಣ್ಣು ಹಂಪಲು ಮತ್ತು ನೀರಿನ ಅಂಶ ಜಾಸ್ತಿ ಇರುವಂತಹ ಆಹಾರಗಳನ್ನ ಹೆಚ್ಚು ತಿನ್ನಬೇಕು.
ಬೇಸಿಗೆಯಲ್ಲಿ ಹೆಚ್ಚಾಗಿ ಸಲಾಡ್ ಗಳನ್ನ ತಿನ್ನಬೇಕು ಸೊಪ್ಪು ತರಕಾರಿಗಳನ್ನ ಹಸಿಯಾಗಿ ತಿನ್ನಬೇಕು. ಫಾಸ್ ಪುಡ್ ಗಳನ್ನ ಆದಷ್ಟು ಕಡಿಮೆ ಮಾಡಬೇಕು.
ಬೆಸಿಗೆಯಲ್ಲಿ ಮೈ ಬೆವರುವು ಒಳ್ಳೆಯದೆ ಬೆವರಲು ಬಿಡಿ, ಈ ಸಮಯದಲ್ಲಿ ಹೆಚ್ಚಾಗಿ ನೀರು ಕುಡಿಯಿಸಿ , ಕಾಫಿ ಟೀ ಸೇವನೆ ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.
ಬೇಸಿಗೆಯಲ್ಲಿ ಕೆಂಪು ಮಾಂಸವನ್ನ ತಿನ್ನುವುದು ಕಡಿಮೆ ಮಾಡಿ ಮೀನು ಅಥವಾ ಮೃಧ್ವಂಗಿಗಳನ್ನ ತಿನ್ನುವುದು ಒಳ್ಳೆಯದು.
ಫ್ರಿಝ್ ನಲ್ಲಿಟ್ಟ ಜ್ಯೂಸ್ ಐಸ್ ಕ್ರೀಂ ನೀರು ಬೇಸಿಗೆಯಲ್ಲಿ ಹಿತ ಅನಿಸಿದರೂ ಬಾಯಾರಿಕೆಯನ್ನ ನೀಗುವುದಿಲ್ಲ ಹಾಗಾಗಿ, ತಾಜಾವಾಗಿ ತಯಾರಿಸಿದ ಮಜ್ಜಿಗೆ, ಪಾನಕ, ಜ್ಯೂಸ್ ಮತ್ತು ಶುದ್ದ ನೀರನ್ನ ಕುಡಿಯಿರಿ.